ಸೆ.5: ಶಿಕ್ಷಕರಿಗಾಗಿ ‘ಭಾರತದ ಬಾಹ್ಯಾಕಾಶ ಪ್ರಯಾಣ’ ಉಪನ್ಯಾಸ

Update: 2020-09-04 18:28 GMT

ಬೆಂಗಳೂರು, ಸೆ.4: ರಾಜ್ಯದ ಎಲ್ಲಾ ಶಿಕ್ಷಕರಿಗೆ ‘ಭಾರತದ ಬಾಹ್ಯಾಕಾಶ ಪ್ರಯಾಣ’ ವಿಷಯದ ಕುರಿತು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‍ ಕುಮಾರ್ ಅವರಿಂದ ವಿಜ್ಞಾನ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸೆ.5ರ ಶಿಕ್ಷಕರ ದಿನಾಚರಣೆಯಂದು ಸಂಜೆ 5 ಗಂಟೆಗೆ ಆನ್‍ಲೈನ್ ಆಧರಿತ ವಿಜ್ಞಾನ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಹಾಗೂ Zoom App  ಹಾಗೂ ತಾರೇಜಮೀನ್ ಪರ್ ಸಂಸ್ಥೆಯ youtube ಮೂಲಕ ಉಪನ್ಯಾಸದಲ್ಲಿ ಭಾಗವಹಿಸಬಹುದು.

ಸೀಮಿತ ಸಂಖ್ಯೆಯ ಶಿಕ್ಷಕರಿಗೆ ಅವಕಾಶವಿದ್ದು ಪಾಲ್ಗೊಳ್ಳ ಬಯಸುವವರು https//tinyurl.com/tzpchannel ಮೂಲಕ ಉಚಿತವಾಗಿ ನೊಂದಣಿ ಮಾಡಿಸಿಕೊಳ್ಳಬಹುದು. ತಾರೇಜಮೀನ್ ಪರ್ ಡಿಜಿಟಲ್ ಸಂಚಾರಿ ತಾರಾಲಯದ ಎಲ್ಲಾ ವಿಜ್ಞಾನ ಸರಣಿ ಉಪನ್ಯಾಸ ಕಾರ್ಯಕ್ರಮಗಳನ್ನು ತಾರೇಜಮೀನ್ ಪರ್ ಸಂಸ್ಥೆಯ ಯುಟ್ಯೂಬ್ ಹಾಗೂ ಫೇಸ್‍ಬುಕ್ ಪೇಜ್‍ನಲ್ಲಿ ವೀಕ್ಷಿಸಬಹುದು.

ಹೆಚ್ಚಿನ ಮಾಹಿತಿಗಾಗಿ 09480843497/9035013642 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಅಥವಾ mail us: info@tarezameenpar.com visit us: www.tarezameenpar.com ವೈಬ್ ಸೈಟ್‍ಗೆ ಭೇಟಿ ನೀಡಬಹುದು.

ಈ ಉಪನ್ಯಾಸ ಕಾರ್ಯಕ್ರಮವನ್ನು ತಾರೇ ಜಮೀನ್ ಪರ್ ಡಿಜಿಟಲ್ ಸಂಚಾರಿ ತಾರಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News