ಫಾರ್ಮಾಸ್ಯುಟಿಕಲ್ ದುರ್ಬಳಕೆ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

Update: 2020-09-06 11:32 GMT

ಬೆಂಗಳೂರು, ಸೆ. 6: ಫಾರ್ಮಾಸ್ಯುಟಿಕಲ್‍ನಲ್ಲಿ ಕೆಲವು ಮಾದಕ ವಸ್ತುಗಳ ದುರ್ಬಳಕೆ ಆಗುತ್ತಿದ್ದು, ಈ ಬಗ್ಗೆ ಸೂಕ್ತ ನಿಗಾವಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾರ್ಮಾ ಸ್ಯುಟಿಕಲ್‍ನಲ್ಲಿ ಕೆಲವು ಮಾದಕ ವಸ್ತುಗಳ ಬಳಕೆ ಮಾಡುತ್ತಾರೆ, ಅದರ, ಇದ ದುರುಪಯೋಗ ಆಗುತ್ತಿದ್ದು, ಇಂತಹ ಕೃತ್ಯಗಳನ್ನು ತಡೆಯಲು ಸೂಚನೆ ನೀಡಿದ್ದೇನೆ.ಅದೇ ರೀತಿ, ವಿದೇಶಿಗಳಿಂದ ಬರುವ ಪಾರ್ಸೆಲ್, ಮಾದಕ ಜಾಲಗಳ ಮೇಲೆ ನಿಗಾವಹಿಸುತ್ತೇವೆ ಎಂದರು.

ನಗರದಲ್ಲಿ ಮಾದಕ ವಸ್ತುಗಳ ಪೂರೈಕೆದಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ ಹಿನ್ನೆಲೆ, ಕಾರ್ಯಕ್ರಮ ಆಯೋಜಕರು ನಗರದ ಹೊರಗೆ ಮತ್ತು ಹೊರ ಜಿಲ್ಲೆಗಳಿಗೆ ಸ್ಥಳಾಂತರ ಆಗುವ ಸಾಧ್ಯತೆಯಿದೆ. ಹಾಗಾಗಿ ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಠಿಣ ಕ್ರಮಕೈಗೊಳ್ಳಲು ಸೂಚನೆ ನೀಡಿರುವುದಾಗಿ ಹೇಳಿದರು.

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸದ್ಯ ಬಂಧಿತ ಆಫ್ರಿಕ ದೇಶದ ಪ್ರಜೆ ಒಬ್ಬ ಪೆಡ್ಲರ್ ಆಗಿದ್ದು, ಹಲವು ಜನರಿಗೆ ಆರೋಪಿ ಮಾದಕ ವಸ್ತುಗಳ ಪೂರೈಕೆ ಮಾಡಿದ್ದಾನೆ. ಈತನಿಂದ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ, ಜೊತೆಗೆ ಎಫ್‍ಐಆರ್ ಹಾಕಿರುವ ಆರೋಪಿಗಳ ತೀವ್ರ ತನಿಖೆ ಆಗಲಿದೆ. ಯಾರು, ಎಷ್ಟೇ ಪ್ರಭಾವಿ ಇದ್ದರೂ ಕ್ರಮಕೈಗೊಳ್ಳುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News