ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆ ನೇಮಕಾತಿ ಪ್ರಕ್ರಿಯೆ: ಶೇ.10ರಷ್ಟು ಮೀಸಲಾತಿ

Update: 2020-09-06 14:25 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ. 6: ಪೊಲೀಸ್ ಇಲಾಖೆಯ ಕಾನ್‍ಸ್ಟೆಬಲ್ (ಸಿವಿಲ್) ಹುದ್ದೆಯ ನೇರ ನೇಮಕಾತಿ ಪ್ರಕ್ರಿಯೆ ಸಂಬಂಧ ಶೇ.10ರಷ್ಟು ಹುದ್ದೆಗಳನ್ನು ಮೀಸಲಿಟ್ಟು, ಹೊಸದಾಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.

ಸಶಸ್ತ್ರ ಮೀಸಲು ಪಡೆ (ಸಿಎಆರ್, ಡಿಎಆರ್), ಕೆಎಸ್ಸಾಆರ್ಪಿ ಮತ್ತು ಕೆಎಸ್‍ಐಎಸ್‍ಎಫ್ ಕರ್ತವ್ಯದಲ್ಲಿರುವವರಿಗೆ ಮೀಸಲಿಟ್ಟು ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸೇವೆಗಳನ್ನು ಒಳಗೊಂಡ ನೇಮಕಾತಿ (ನಿಯಮ) ತಿದ್ದುಪಡಿ-2020ರ ನಿಯಮದ ಗೆಜೆಟ್ ಪ್ರಕಟನೆ ಇದಾಗಿದೆ.

ತಿದ್ದುಪಡಿ ನಿಯಮಗಳ ಪ್ರಕಾರ, ಪುರುಷ ಮತ್ತು ಮಹಿಳೆಯರು ಸೇರಿ ರಾಜ್ಯದಲ್ಲಿ ಒಟ್ಟು 36,261 ಪೊಲೀಸ್ ಕಾನ್‍ಸ್ಟೆಬಲ್ (ಸಿವಿಲ್) ಹುದ್ದೆಗಳಿವೆ. ಈ ಪೈಕಿ, ಶೇ 67.5 ಹುದ್ದೆಗಳಿಗೆ ಪುರುಷರು, ಶೇ 22.5 ಹುದ್ದೆಗಳಿಗೆ ಮಹಿಳೆಯರು.

ಹಾಗೆ ಇನ್ನುಳಿದ ಶೇ10ರಷ್ಟು ಹುದ್ದೆಗಳನ್ನು ಸಿಎಆರ್, ಡಿಎಆರ್, ಕೆಎಸ್ಸಾಆರ್ಪಿ ಕೆಎಸ್‍ಐಎಸ್‍ಎಫ್ ವೃಂದಗಳಲ್ಲಿ ಕರ್ತವ್ಯದಲ್ಲಿ ಇರುವವರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶೇ.10ರಲ್ಲಿ ಶೇ.7.5ರಷ್ಟು ಪುರುಷರಿಗೆ, ಶೇ.2.5ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News