ಜಿಂಕೆ ಬೇಟೆ: ಇಬ್ಬರ ಬಂಧನ

Update: 2020-09-06 15:38 GMT

ಶಿವಮೊಗ್ಗ: ತಾಲೂಕಿನ ಕುಂಸಿ ಸಮೀಪದ ಆಡಗಡಿಯಲ್ಲಿ ಜಿಂಕೆ ಬೇಟೆಯಾಡಿ ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ರವಿವಾರ ಬಂಧಿಸಲಾಗಿದೆ. ಆಡಗಡಿಯ ಅನಿಲ್ ಹಾಗೂ ಹನುಮಂತ ಬಂಧಿತರು.

ಮಂಡಘಟ್ಟ ಅರಣ್ಯ ವಲಯದಲ್ಲಿ ಜಿಂಕೆ ಬೇಟೆಯಾಡಿ 40 ಕೆ.ಜಿ. ಮಾಂಸ, ಜಿಂಕೆ ತಲೆ ಹಾಗೂ ಚರ್ಮವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕುಂಸಿ ಪೋಲಿಸ್ ಠಾಣೆ ಪಿ.ಎಸ್.ಐ ನವೀನ್ ಕುಮಾರ್ ಮಠಪತಿ ಹಾಗೂ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News