ಕೋವಿಡ್19: ಕೊಡಗಿನಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆ

Update: 2020-09-06 16:55 GMT
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್

ಮಡಿಕೇರಿ ಸೆ.6 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಕೋವಿಡ್ ನಿಂದಾಗಿ ಮೃತಪಟ್ಟವರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. 

ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಮಡಿಕೇರಿ ತಾಲ್ಲೂಕು ಎಮ್ಮೆಮಾಡು ಗ್ರಾಮದ ನಿವಾಸಿ 58 ವರ್ಷದ ಮಹಿಳೆ ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ.

ಜ್ವರ ಮತ್ತು ಉಸಿರಾಟದ ತೊಂದರೆಯಲ್ಲಿದ್ದ ಮಹಿಳೆಯನ್ನು ಆ.24 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಐ.ಸಿ.ಯು.ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತಾದರೂ ಇಂದು ಬೆಳಗ್ಗಿನ ಜಾವ 1.45 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಕೋವಿಡ್ ಸೋಂಕಿತರ ಸಂಖ್ಯೆ 1724ಕ್ಕೆ ಏರಿಕೆ
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1724ಕ್ಕೆ ಏರಿಕೆಯಾಗಿದ್ದು, 1319 ಮಂದಿ ಗುಣಮುಖರಾಗಿದ್ದಾರೆ. 382 ಸಕ್ರಿಯ ಪ್ರಕರಣಗಳಿದ್ದು, 23 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 279 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ 22 ಹಾಗೂ ಮಧ್ಯಾಹ್ನ 22 ಸೇರಿದಂತೆ ಒಟ್ಟು 44 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದು ಹೆಚ್ಚಿನ ಸಂಖ್ಯೆಯ ಸೋಂಕಿತರು ಕಂಡು ಬಂದಿದ್ದು, ಗೋಣಿಕೊಪ್ಪ ಅರವತ್ತೊಕ್ಲುವಿನ ಮಸೀದಿ ಬಳಿಯ 33 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷ, ಕಾಫಿ ಬೋರ್ಡ್ ಬಳಿಯ 31 ವರ್ಷದ ಪುರುಷ,  ಗೋಣಿಕೊಪ್ಪದ ಕೋಣನಕಟ್ಟೆ ಮಾರಿಯಮ್ಮ ದೇವಾಲಯ ಬಳಿಯ 24 ವರ್ಷದ ಮಹಿಳೆ, 2ನೇ ಬ್ಲಾಕಿನ 77 ವರ್ಷದ ಮಹಿಳೆ, ಕುಟ್ಟದ ಸಿಂಕೋನ ಗ್ರಾಮದ 38 ವರ್ಷದ ಮಹಿಳೆ,        ಅಂಗನವಾಡಿ ಬಳಿಯ 57 ವರ್ಷದ ಪುರುಷ, ವಿರಾಜಪೇಟೆ ಕಲ್ಲುಬಾಣೆಯ ವಾಟರ್ ಟ್ಯಾಂಕ್ ಸಮೀಪದ 61 ವರ್ಷದ ಮಹಿಳೆ, ಪೊಲೀಸ್ ವಸತಿಗೃಹದ 53 ವರ್ಷದ ಪುರುಷ, ಮುತ್ತಪ್ಪ ದೇವಾಲಯ ಬಳಿಯ 29 ವರ್ಷದ ಮಹಿಳೆ, ತಿತಿಮತಿಯ ಹೆಬ್ಬಾಲೆ ಗ್ರಾಮದ ದೇವರಪುರದ 58 ವರ್ಷದ ಮಹಿಳೆ, ಸಿಗೇತೋಡುವಿನ ಆರ್.ಎಂ.ಸಿ ಬಳಿಯ 42 ವರ್ಷದ ಪುರುಷ ಮತ್ತು 6 ವರ್ಷದ ಬಾಲಕಿ, ವಿಜಯನಗರ 1ನೇ ಹಂತದ 36 ವರ್ಷದ ಪುರುಷ, ಗೋಣಿಕೊಪ್ಪದ ಎಚ್.ಸಿ ಪುರ ಟೆಲಿಫೋನ್ ಎಕ್ಸ್ ಚೇಂಚ್ ಬಳಿಯ 19 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News