ಮಡಿಕೇರಿ: ತುಳು ಭಾಷಾ ವಿವಿಧ ಸ್ಪರ್ಧೆಗಳ ವಿಜೇತರು

Update: 2020-09-06 16:56 GMT

ಮಡಿಕೇರಿ,ಸೆ.6 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ವತಿಯಿಂದ ನಡೆದ ತುಳು ಗಾದೆ, ತುಳು ಒಗಟು ಹಾಗೂ ತುಳು ಕವಿತೆ ಸ್ಪರ್ಧಾ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ.

ತುಳು ಗಾದೆ ಸಂಗ್ರಹ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಪುಲ್ಲುರಿಕೊಪ್ಪದ ಅನ್ವಿತ್ ಹೆಚ್.ಶೆಟ್ಟಿ ಪ್ರಥಮ ಹಾಗೂ ಮಡಿಕೇರಿಯ ಶಶಿಕಲಾ ಪೂಜಾರಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ತುಳು ಎದುರು ಕತೆ (ಒಗಟು) ಸ್ಪರ್ಧೆಯಲ್ಲಿ ಮಡಿಕೇರಿಯ ಸೌಮ್ಯ ವಿಜಯ ಪ್ರಥಮ ಹಾಗೂ ಗೋಣಿಕೊಪ್ಪದ ವಿನುತಾ ಎಸ್.ರೈ ದ್ವಿತೀಯ ಬಹುಮಾನ ಗಳಿಸಿದ್ದಾರೆ.

ತುಳು ಕವಿತೆ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಮಸಗೋಡು ಗ್ರಾಮದ ಕೆ.ವಿ.ಪುಟ್ಟಣಾಚಾರ್ಯ ಪ್ರಥಮ ಹಾಗೂ ಮೂರ್ನಾಡು ಗ್ರಾಮದ ರಮ್ಯ ಕೆ.ಜಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಈ ಎಲ್ಲಾ ಸ್ಪರ್ಧೆಗಳಲ್ಲಿ 131 ಸ್ಪರ್ಧಿಗಳು ಪಾಲ್ಗೊಂಡಿದ್ದರು ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ತಿಳಿಸಿದರು.
ಸ್ಪರ್ಧೆಗಳ ತೀರ್ಪುಗಾರರಾಗಿ ಆರ್.ಬಿ.ರವಿ, ಬಿ.ಎಸ್.ಜಯಪ್ಪ ಹಾಗೂ ಬಿ.ಬಿ.ಐತ್ತಪ್ಪ ರೈ ಅವರುಗಳು ಕಾರ್ಯ ನಿರ್ವಹಿಸಿದರು. 

ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರು ಹಾಗೂ ಜನಪದ ಕೂಟದ ಪ್ರಮುಖರ ಉಪಸ್ಥಿತಿಯಲ್ಲಿ ವಿಜೇತರಿಗೆ ಸಧ್ಯದಲ್ಲಿಯೇ ಬಹುಮಾನ ವಿತರಿಸಲಾಗುವುದು ಎಂದು ರವಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News