ತಳವಾರ ಪರಿವಾರಕ್ಕೆ ಶೀಘ್ರವೇ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ವಿತರಣೆ: ಡಿಸಿಎಂ ಲಕ್ಷ್ಮಣ ಸವದಿ
Update: 2020-09-07 13:32 IST
ಕಲಬುರಗಿ, ಸೆ.7: ತಳವಾರ, ಪರಿವಾರ ಸಮುದಾಯಗಳ ಈ ಜ್ವಲಂತ ಸಮಸ್ಯೆ ಸರಕಾರದ ಗಮನದಲ್ಲಿದೆ. ಆದಷ್ಟು ಬೇಗ ಇವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇಂದು ನಗರಕ್ಕೆ ಬೇಟಿ ಕೊಟ್ಟ ಸಂದರ್ಭ ತಳವಾರ ಪರಿವಾರ ಎಸ್ಟಿ ಹೋರಾಟ ಸಮಿತಿ ನಿಯೋಗ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರ್ ಅವರು ಮುಖ್ಯಮಂತ್ರಿ ಮತ್ತು ತನ್ನ ಗಮನಕ್ಕೆ ತಂದು ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ. ಸರ್ದಾರ ರಾಯಪ್ಪ, ರಾಜೇಂದ್ರ ರಾಜವಾಳ, ರವಿ ಸಣ್ಣ ಸಂತಮ್, ಬಿ.ಸಿ.ಪಾಟೀಲ್ , ಚಂದ್ರಶೇಖರ ಜಮಾದಾರ ವಕೀಲರು, ದೇವಾನಂದ್ ಆರ್. ಸೊಪ್ಪು, ದೇವೇಂದ್ರ ಚಿಗರಳ್ಳಿ,ಶಿವು ಸುಣಗಾರ, ಸೈಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ ಇನ್ನಿತರರು ಉಪಸ್ಥಿತರಿದ್ದರು