ಸೆ.12 ರಿಂದ ಏಳು ವಿಶೇಷ ರೈಲುಗಳ ಸಂಚಾರ ಆರಂಭ

Update: 2020-09-07 12:46 GMT

ಬೆಂಗಳೂರು, ಸೆ.7: ಕೊರೋನ ಕಾರಣದಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ಹಂತಹಂತವಾಗಿ ಟ್ರ್ಯಾಕ್‍ಗೆ ಮರಳಲಿದ್ದು, ಸೆ. 12ರಿಂದ ನೈಋತ್ಯ ರೈಲ್ವೆ 7 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ.

ರಾಜ್ಯದ ವಿವಿಧ ನಗರಗಳು ಹಾಗೂ ಹೊರರಾಜ್ಯಗಳಿಗೆ ಸಂರ್ಪಸುವ 7 ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಅದರನ್ವಯ, ರವಿವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ರೈಲುಗಳು ಸಂಚಾರ ಮಾಡಲಿವೆ.

ಬೆಂಗಳೂರು-ಮೈಸೂರು ನಡುವೆ ಬುಧವಾರ, ಗುರುವಾರ ಮತ್ತು ಶುಕ್ರವಾರ ಬೆಂಗಳೂರು ದಂಡು ನಿಲ್ದಾಣದಿಂದ ಗುವಾಹಟಿಗೆ ಶುಕ್ರವಾರ ಮತ್ತು ರವಿವಾರ ಯಶವಂತಪುರದಿಂದ ರಾಜಸ್ಥಾನದ ಬಿಕಾನೇರ್ ಗೆ ಸೋಮವಾರ ಮತ್ತು ಮಂಗಳವಾರ ಯಶವಂತಪುರದಿಂದ ಉತ್ತರ ಪ್ರದೇಶದ ಗೋರಖ್‍ಪುರಕ್ಕೆ ಗುರುವಾರ ಮತ್ತು ಶನಿವಾರ ಮೈಸೂರಿನಿಂದ ಜೈಪುರಕ್ಕೆ ರೈಲುಗಳು ಸಂಚರಿಸಲಿವೆ. ಮೈಸೂರಿನಿಂದ ಸೊಲ್ಲಾಪುರ, ಬೆಂಗಳೂರಿನಿಂದ ದೆಹಲಿಗೆ ಪ್ರತಿದಿನ ವಿಶೇಷ ರೈಲು ಸೇವೆ ಇರಲಿದೆ. ಸೆ. 10ರಿಂದ ಆನ್‍ಲೈನ್‍ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News