×
Ad

ಬಿಜೆಪಿ ಸಬ್ಸಿಡಿ ರದ್ದು ಮಾಡಿ ಮಹಿಳೆಯರ ಡಬ್ಬಿ ಹಣಕ್ಕೂ ಕನ್ನಹಾಕುತ್ತಿದೆ: ಈಶ್ವರ್ ಖಂಡ್ರೆ ಆಕ್ರೋಶ

Update: 2020-09-07 18:36 IST

ಬೆಂಗಳೂರು, ಸೆ.7: ಕೇಂದ್ರದ ನರೇಂದ್ರ ಮೋದಿ ಸರಕಾರ ಗ್ಯಾಸ್ ಸಬ್ಸಿಡಿಯನ್ನ ಧಿಡೀರ್ ಆಗಿ ರದ್ದುಗೊಳಿಸಿದೆ. ಮಹಿಳೆಯರ ವೋಟ್ ಪಡೆದು ಅಧಿಕಾರಕ್ಕೆ ಬಂದ ಮೋದಿ ಸರಕಾರ ಈಗ ಮಹಿಳೆಯರು ಬಳಸುವ ಗ್ಯಾಸ್ ಸಿಲಿಂಡರ್‍ನ ಸಬ್ಸಿಡಿಯನ್ನೆ ರದ್ದುಗೊಳಿಸಿದ್ದು ಮಧ್ಯಮ ವರ್ಗದ ಜನರಿಗೆ ಮಾಡಿದ ಮೋಸ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಉಜ್ವಲ ಹೆಸರಲ್ಲಿ ಪ್ರಚಾರಗಿಟ್ಟಿಸುವ ಬಿಜೆಪಿ ಈಗ ಸಬ್ಸಿಡಿ ರದ್ದು ಮಾಡಿ ಮಹಿಳೆಯರು ಕೂಡಿಡುವ ಡಬ್ಬಿ ಹಣಕ್ಕೂ ಕನ್ನಹಾಕುತ್ತಿದೆ. ಈಗ ಹೇಳಿ ಸಬ್ಸಿಡಿ ರದ್ದು ಮಾಡಿದ್ದು ನಿಮ್ಮ ಸರಕಾರವೋ ಅಥವಾ ಅದು ಕೂಡ ಆಕ್ಟ್ ಆಫ್ ಗಾಡ್ ಪರಿಣಾಮವೋ ಎಂದು ಪ್ರಶ್ನಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News