ರಾಜ್ಯ ಎಸ್ಸೆಸ್ಸೆಫ್ ನಿಂದ ಡೀನ್ ಕಾರ್ಯಾಗಾರಕ್ಕೆ ಚಾಲನೆ

Update: 2020-09-07 16:54 GMT

ಬೆಂಗಳೂರು, ಸೆ.7: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಡಿವಿಷನ್ ಡೀನ್ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಝೂಮ್ ನಲ್ಲಿ ನಡೆಯಿತು.

ಜಿಲ್ಲಾ ನಾಯಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದ ರಾಜ್ಯ ಸಮಿತಿಯು ಅದರ ಮುಂದುವರಿದ ಭಾಗವಾಗಿ ಡಿವಿಷನ್ ನಾಯಕರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರವಾಗಿದೆ ಇದು. ಸೆಪ್ಟಂಬರ್ 6 ರಿಂದ ಆರಂಭವಾಗಿ ಸೆಪ್ಟಂಬರ್ 13ರತನಕ ನಡೆಯುವ ಕಾರ್ಯಾಗಾರದಲ್ಲಿ ರಾಷ್ಟ್ರೀಯ, ಕೇರಳ ಹಾಗೂ ಕರ್ನಾಟಕ ರಾಜ್ಯ ನುರಿತ ತರಬೇತಿದಾರರು ತರಬೇತಿ ನೀಡಲಿದ್ದಾರೆ.

ಖತರ್ ಕೆಸಿಎಫ್ ಇಹ್ಸಾನ್ ಕಾರ್ಯದರ್ಶಿ ರಹೀಂ ಸಅದಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ ತರಬೇತಿ ನೀಡಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಕೆ.ಎಂ. ಮುಸ್ತಫಾ ನಈಮಿ ಡೀನ್ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ ಹಾಗೂ ರಾಜ್ಯ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News