ಜನತೆಯ ವಿರೋಧದದ ನಡುವೆ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಅಕ್ಷಮ್ಯ: ರವಿಕೃಷ್ಣಾರೆಡ್ಡಿ
Update: 2020-09-08 17:21 IST
ಬೆಂಗಳೂರು, ಸೆ.8: ಜನತೆಯ ವಿರೋಧದ ನಡುವೆ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಡಬಾರದೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿರುವ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಜನತೆಯ ವಿರೋಧದ ನಡುವೆ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಮುಂದಾಗಿರುವುದು ಅಕ್ಷಮ್ಯ ಅಪರಾಧವೆಂದು ತಿಳಿಸಿದ್ದಾರೆ.
ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಾರೆಂಬ ನೆಪದಲ್ಲಿ ಕನ್ನಡ ಹೋರಾಟಗಾರರನ್ನು ಬಂಧಿಸಲಾಗಿದೆ. ಇದು ರಾಜ್ಯ ಸರಕಾರದ ಅತಿರೇಕದ ಪ್ರವೃತ್ತಿಯಾಗಿದೆ. ಇಂದಿನ ಯುವ ತಲೆಮಾರಿಗೆ ಕನ್ನಡ ಅಸ್ಮಿತೆಗಾಗಿ ತುಡಿತವಿದೆ. ಹೀಗಾಗಿ ಕನ್ನಡಿಗರಿಗೆ ಒಪ್ಪಿತವಾಗದ ಹೆಸರನ್ನು ಇಡುವುದು ಸರಿಯಲ್ಲವೆಂದು ಹೇಳಿದ್ದಾರೆ.