ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಗೆ ಮತ್ತೆ ಎಂಟು ಬಲಿ; ಸಾವಿನ ಸಂಖ್ಯೆ 174ಕ್ಕೆ ಏರಿಕೆ

Update: 2020-09-08 16:35 GMT

ಶಿವಮೊಗ್ಗ, ಸೆ.8: ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಂಗಳವಾರ ಮತ್ತೆ ಎಂಟು ಜನರನ್ನು ಬಲಿ ಪಡೆದಿದ್ದು, ಸಾವಿನ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.

359 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಗುಣಮುಖರಾದ 405 ಜನರನ್ನು ಬಿಡುಗಡೆಗೊಳಿಸಲಾಗಿದೆ. 

ಇಂದು 1906 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 1209 ನೆಗೆಟಿವ್ ಬಂದಿವೆ. ಶಿವಮೊಗ್ಗದಲ್ಲಿ 152, ಭದ್ರಾವತಿ 72, ಶಿಕಾರಿಪುರ 57, ತೀರ್ಥಹಳ್ಳಿ 23, ಸೊರಬ 19, ಸಾಗರ 15, ಹೊಸನಗರ 12 ಮತ್ತು ಬೇರೆ ಜಿಲ್ಲೆಯ 9 ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 148, ಕೋವಿಡ್ ಕೇರ್ ಸೆಂಟರ್‌ನಲ್ಲಿ 179, ಖಾಸಗಿ ಆಸ್ಪತ್ರೆಯಲ್ಲಿ 279 ಮತ್ತು ಮನೆಯಲ್ಲಿ 1432 ಜನ ಆರೈಕೆಯಲ್ಲಿದ್ದು, ಜಿಎಡಿ ಆಸ್ಪತ್ರೆಯಲ್ಲಿ 238 ಸೇರಿ ಒಟ್ಟು 2276 ಸಕ್ರಿಯ ಕೊರೋನ ಪ್ರಕರಣಗಳಿವೆ. 1480 ಕಂಟೈನ್‌ಮೆಂಟ್ ಝೋನ್‌ಗಳನ್ನು ಡಿನೋಟಿಫೈ ಮಾಡಿದ್ದು, ಇನ್ನೂ 4449 ಝೋನ್‌ಗಳಿವೆ.

ಆಯನೂರುಗೆ ಸೋಂಕು
ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಇವರ ಜತೆ ಕಾರು ಚಾಲಕನಿಗೂ ಸೋಂಕು ತಗಲಿದೆ.

ಸೋಮವಾರ ಬೆಂಗಳೂರಿನಿಂದ ಬಂದಿದ್ದ ಆಯನೂರು ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಇರುವುದು ತಿಳಿದುಬಂದಿದೆ. ಇವರಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿಲ್ಲ.

ಡಿಎಚ್‌ಒ, ಡಿಎಸ್ ಗುಣಮುಖರಾಗಲಿ
ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಆರ್. ರಘುನಂದನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರು ಕೋವಿಡ್ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಶಾಂತವೇರಿ ಗೋಪಾಲಗೌಡ  ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News