×
Ad

ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗೆ ಕೃತಿಗಳ ಆಯ್ಕೆ

Update: 2020-09-10 21:24 IST

ಬೆಂಗಳೂರು, ಸೆ.10: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2019ನೇ ಸಾಲಿಗೆ ವಿವಿಧ ದತ್ತಿ ಪ್ರಶಸ್ತಿಗೆ ಡಾ.ಜಿ.ರಾಮಕೃಷ್ಣ, ಪ್ರೊ.ಎಚ್.ಟಿ.ಪೋತೆ ಸೇರಿದಂತೆ ಹಲವು ಲೇಖಕರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ತಿಳಿಸಿದ್ದಾರೆ.

ಆಯ್ಕೆಯಾದ ಲೇಖಕರು: ಡಾ.ಬಿ.ಎಸ್.ಶೈಲಜಾರವರ ಆಕಾಶದಲ್ಲಿ ಏನಿದೆ? ಏಕಿದೆ?, ಪ್ರೊ.ವಸಂತ ಕುಷ್ಟಗಿ(ಕಾಯಕ ಧರ್ಮ), ಪ್ರೊ.ಕೆ.ಎಂ.ಸೀತಾರಾಮಯ್ಯ(ಪ್ಯಾರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್ ರೀಗೇಯ್ನ್‍ಡ್), ಡಾ.ನೀರಜಾ ನಾಗೇಂದ್ರ ಕುಮಾರ್ (ಝಾಣಜ್ಝಯಣ-ಪಾಹುಡ), ಬಿ.ಪಿ.ನ್ಯಾಮಗೌಡ(ವೀರಾನ್ವಯ), ಬಿ.ಆರ್.ಪೊಲೀಸ್ ಪಾಟೀಲ್(ಮಹಾವೃಕ್ಷ). ಕೃಷ್ಣಮೂರ್ತಿ ಚಂದರ್(ಅಸ್ಮಿತೆ), ವಿಶಾಲಾ ಆರಾಧ್ಯ(ಬೊಂಬಾಯಿ ಮಿಠಾಯಿ).

ಕೆ.ಶರದಾ(ದ್ರೌಪದಿ), ವಿ.ವಿ.ಗೋಪಾಲ್(ಗುಂಡನ ಅವಾಂತರ), ಗಣೇಶ್‍ ರಾವ್(ಮನದೊಳಗಿನ ಮಾತು), ಕೆ.ಸತ್ಯನಾರಾಯಣ (ಲೈಂಗಿಕ ಜಾತಕ), ದೀಪ್ತಿ ಭದ್ರಾವತಿ(ಗೀರು), ಸಮನ್ವಿತ ಪ್ರಕಾಶ(ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ), ಪ್ರೊ.ಎಚ್.ಟಿ.ಪೋತೆ(ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕ ಪ್ರೀತಿ), ಡಾ.ಬಸು ಬೇವಿನಗಿಡದ(ನೆರಳಿಲ್ಲದ ಮರ), ಸಂತೋಷಕುಮಾರ ಮೆಹೆಂದಳೆ(ಎಂಟೆಬೆ..!), ಸುಧಾ ಅಡುಕಳ(ಬಕುಲದ ಬಾಗಿಲಿನಿಂದ), ಡಾ.ಜಿ.ರಾಮಕೃಷ್ಣ(ವರ್ತಮಾನ), ಸಹನಾ ಕಾಂತಬೈಲು(ಆನೆ ಸಾಕಲು ಹೊರಟವಳು), ಬಿ.ಸತ್ಯವತಿ ಎಸ್.ಭಟ್, ಕೊಳಚಪ್ಪುರವರ ಕಾಮನಬಿಲ್ಲು ಕೃತಿ ಸೇರಿದಂತೆ ಹಲವು ಲೇಖಕರ ಕೃತಿಗಳು ದತ್ತಿ ಪ್ರಶಸ್ತಿಗೆ ಆಯ್ಕೆ ಆಗಿವೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News