×
Ad

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 824 ತಜ್ಞ ವೈದ್ಯ ಹುದ್ದೆಗಳ ಭರ್ತಿಗೆ ಅನುಮತಿ

Update: 2020-09-11 17:39 IST

ಬೆಂಗಳೂರು, ಸೆ.11: ರಾಜ್ಯ ಸರಕಾರದ ವಿಶೇಷ ನೇಮಕಾತಿ ಸಮಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 824 ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದೆ.

ಮಂಜೂರಾಗಿದ್ದ 2,832 ತಜ್ಞ ವೈದ್ಯರ ಹುದ್ದೆಗಳಲ್ಲಿ ಸದ್ಯ 2,008 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. 50 ವರ್ಷ ಮೇಲ್ಪಟ್ಟ ಕೆಲ ಹಿರಿಯ ವೈದ್ಯರಿಗೆ ಕೋವಿಡ್ ಕೆಲಸದಿಂದ ವಿನಾಯಿತಿ ನೀಡಿದೆ. ಇದರಿಂದ ತಜ್ಞ ವೈದ್ಯರ ಸಮಸ್ಯೆ ಇನ್ನಷ್ಟು ಹೆಚ್ಚಿದೆ.

ಖಾಲಿ ಇರುವ 1,246 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ 88 ದಂತ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಲಾಗಿದೆ. ವೆಬ್‍ಸೈಟ್ karunadu.karnataka.gov.in ನಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಇಲಾಖೆಯ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News