ಮನವಿ ಸ್ವೀಕರಿಸಲು ಕಾರು ನಿಲ್ಲಿಸದ ಬಗ್ಗೆ ಸ್ಪಷ್ಟನೆ ನೀಡಿದ ಶೋಭಾ ಕರಂದ್ಲಾಜೆ

Update: 2020-09-11 15:58 GMT

ಚಿಕ್ಕಮಗಳೂರು, ಸೆ.11: ಕಪ್ಪು ಬಾವುಟ ಪ್ರದರ್ಶಿಸಿದರೆ ನಾನ್ಯಾಕೆ ಕಾರು ನಿಲ್ಲಿಸಬೇಕೆಂದು ಕಳಸ ಪಟ್ಟಣದಲ್ಲಿ ನಡೆದ ಘಟನೆಗೆ ಸಂಸದೆ ಶೋಭಾ ಕರಂದ್ಲಾಜೆ ಗರಂ ಆಗಿ ಪ್ರತಿಕ್ರಿಯಿಸಿದರು.

ಕಳಸ ತಾಲೂಕು ಕೇಂದ್ರ ಕಾರ್ಯಾಂಭಕ್ಕೆ ಒತ್ತಾಯಿಸಿ ಮನವಿ ನೀಡಲು ಬಂದವರು ಕಪ್ಪು ಬಾವುಟ ಹಿಡಿದಿದ್ದರು. ಅವರು ಕಪ್ಪು ಬಾವುಟ ಪ್ರದರ್ಶಿಸಿದರೆ, ಕಪ್ಪು ಬಾವುಟ ನೋಡಲು ಕಾರು ನಿಲ್ಲಿಸಬೇಕಿತ್ತೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೇ ಅವರದ್ದೇ ಅವಧಿಯಲ್ಲಿ ಕಳಸ ತಾಲೂಕು ಕೇಂದ್ರ ಕಾರ್ಯಾರಂಭ ಮಾಡಲು ಕ್ರಮಕೈಗೊಳ್ಳಲಿಲ್ಲ. ಬೇಕಾದರೆ ವಿಧಾನಸಭೆಯಲ್ಲಿ ನಿಮ್ಮ ನಾಯಕರು ಮಾತನಾಡಲಿ, ನಿಮ್ಮ ನಾಯಕರಿಗೆ ಬೇಕಾದರೆ ಕಪ್ಪು ಬಾವುಟ ಪ್ರದರ್ಶಿಸಿ ಎಂದರು.

ಕಳಸ ತಾಲೂಕು ಕೇಂದ್ರ ಕಾರ್ಯಾರಂಭಕ್ಕೆ ಎಲ್ಲಾ ಪ್ರಯತ್ನ ನಡೆಯುತ್ತಿದೆ. ಅನೇಕ ಸಭೆಗಳನ್ನು ನಡೆಸಿದ್ದೇವೆ. ಕಂದಾಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಿದ್ದೇನೆ. ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿರುವಾಗ ಕೋವಿಡ್-19 ಬಂದ ಕಾರಣದಿಂದ ತಾಲೂಕು ಕೇಂದ್ರ ಕಾರ್ಯಾರಂಭ ತಡವಾಗಿದೆ ಎಂದು ತಿಳಿಸಿದರು.

ಕಳಸ ತಾಲೂಕು ಕೇಂದ್ರ ಮಾಡುತ್ತೇವೆ. ತಹಶೀಲ್ದಾರ್ ನೇಮಕ ಮಾಡುತ್ತೇವೆ. ಕಚೇರಿ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ಮತ್ತು ಮಿನಿ ವಿಧಾನಸೌದ ನಿರ್ಮಾಣ ಮಾಡಲು ಬದ್ಧರಾಗಿದ್ದೇವೆ ಎಂದ ಅವರು, ನಾವೆಲ್ಲರೂ ಸಹಮತದಿಂದ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗೋಣ ಎಂದರೆ ನಾನು ರೆಡಿ ಇದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News