ಮಾದಕ ವಸ್ತು ಮಾರಾಟದ ಬಗ್ಗೆ ಹೇಳಿಕೆ: ಪ್ರತಾಪ್ ಸಿಂಹರನ್ನು ವಿಚಾರಣೆಗೊಳಪಡಿಸಲು ಕಾಂಗ್ರೆಸ್ ಆಗ್ರಹ
Update: 2020-09-11 21:59 IST
ಬೆಂಗಳೂರು, ಸೆ.11: ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾದಕ ವಸ್ತುಗಳು ಶಾಲಾ, ಕಾಲೇಜುಗಳಲ್ಲಿ ಮಾರಾಟವಾಗುತ್ತಿದೆ, ಆದರೆ ಹೆಸರು ಹೇಳುವುದಿಲ್ಲ ಎಂದಿದ್ದಾರೆ. ಮಾದಕ ಜಾಲ ಪ್ರತಾಪ್ ಸಿಂಹರಿಗೆ ಚಿರಪರಿಚಿತವಿರುವಂತಿದೆ, ಅಕ್ರಮ ವಿಚಾರ ತಿಳಿದೂ ಮುಚ್ಚಿಡುವುದು ಅಪರಾಧವಾಗಿದೆ. ಪೊಲೀಸರು ಕೂಡಲೆ ಇವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.