ರಾಜ್ಯ ಕಾಂಗ್ರೆಸ್ ನೂತನ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೆವಾಲಾ ನೇಮಕ

Update: 2020-09-11 17:51 GMT

ಬೆಂಗಳೂರು, ಸೆ.11: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರ್ನಾಟಕ ಸೇರಿದಂತೆ 17 ರಾಜ್ಯಗಳ ಉಸ್ತುವಾರಿಗಳನ್ನು ಹಾಗೂ ಒಂಭತ್ತು ಮಂದಿ ಪ್ರಧಾನ ಕಾರ್ಯದರ್ಶಿಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ: ಮುಕುಲ್ ವಾಸ್ನಿಕ್- ಮಹಾರಾಷ್ಟ್ರ, ಹರೀಶ್ ರಾವತ್- ಪಂಜಾಬ್, ಉಮ್ಮನ್ ಚಾಂಡಿ- ಆಂಧ್ರಪ್ರದೇಶ, ತಾರೀಖ್ ಅನ್ವರ್-ಕೇರಳ, ಲಕ್ಷದೀಪ, ಪ್ರಿಯಾಂಕ ಗಾಂಧಿ ವಾದ್ರ-ಉತ್ತರ ಪ್ರದೇಶ, ರಣದೀಪ್ ಸಿಂಗ್ ಸುರ್ಜೇವಾಲಾ-ಕರ್ನಾಟಕ, ಜೀತೇಂದ್ರ ಸಿಂಗ್-ಅಸ್ಸಾಂ, ಅಜಯ್ ಮಾಕನ್-ರಾಜಸ್ತಾನ ಹಾಗೂ ಕೆ.ಸಿ.ವೇಣುಗೋಪಾಲ್-ಸಂಘಟನೆ.

ಉಸ್ತುವಾರಿ: ಪವನ್ ಕುಮಾರ್ ಬನ್ಸಾಲ್-ಆಡಳಿತ, ರಜನಿ ಪಾಟೀಲ್-ಜಮ್ಮು ಮತ್ತು ಕಾಶ್ಮೀರ, ಪಿ.ಎಲ್.ಪುನಿಯಾ-ಛತ್ತೀಸ್‍ಗಡ, ಆರ್.ಪಿ.ಎನ್.ಸಿಂಗ್-ಜಾರ್ಖಂಡ್, ಶಕ್ತೀಶ್ ಗೋಹಿಲ್-ದಿಲ್ಲಿ ಮತ್ತು ಬಿಹಾರ, ರಾಜೀವ್ ಶಂಕರ್‍ರಾವ್ ಸತ್ತಾವ್-ಗುಜರಾತ್, ದಾದ್ರಾ ಮತ್ತು ನಾಗರ್ ಹವೇಲಿ, ದಾಮನ್ ಮತ್ತು ದಿಯು.

ರಾಜೀವ್ ಶುಕ್ಲಾ-ಹಿಮಾಚಲ್ ಪ್ರದೇಶ, ಜಿತಿನ್ ಪ್ರಸಾದ್-ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ದಿನೇಶ್ ಗುಂಡೂರಾವ್-ತಮಿಳುನಾಡು, ಪಾಂಡಿಚೇರಿ ಮತ್ತು ಗೋವಾ, ಮಾಣಿಕ್ಯಂ ಠಾಕೂರ್-ತೆಲಂಗಾಣ, ಡಾ.ಚೆಲ್ಲಕುಮಾರ್- ಓಡಿಶಾ, ಎಚ್.ಕೆ.ಪಾಟೀಲ್-ಮಹಾರಾಷ್ಟ್ರ.

ದೇವೇಂದ್ರ ಯಾದವ್-ಉತ್ತರಖಾಂಡ, ವಿವೇಕ್ ಬನ್ಸಾಲ್-ಹರಿಯಾಣ, ಮನೀಶ್ ಚತ್ರಾತ್-ಅರುಣಾಚಲ ಪ್ರದೇಶ ಮತ್ತು ಮೇಘಾಲಯ, ಭಕ್ತ ಚರಣ್ ದಾಸ್-ಮಿಝೋರಾಂ ಮತ್ತು ಮಣಿಪುರ, ಕುಲ್ಜಿತ್ ಸಿಂಗ್ ನಾಗ್ರಾ-ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳಿಗೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News