×
Ad

ಡ್ರಗ್ಸ್ ಜಾಲ ಪತ್ತೆಹಚ್ಚುವಲ್ಲಿ ಕರ್ತವ್ಯ ಲೋಪ: ಎಸ್ಸೈ ಸಹಿತ ನಾಲ್ವರು ಸಿಬ್ಬಂದಿ ಅಮಾನತು

Update: 2020-09-12 15:35 IST

ಕಲಬುರಗಿ, ಸೆ.12: ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಣ ನಾಯಕ್ ತಾಂಡಾದ ಕುರಿ ಫಾರ್ಮ್ ಹೌಸ್​ನಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ 1,200 ಕೆ.ಜಿ. ಗಾಂಜಾ ಮಾಫಿಯಾ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪ್ರಕರಣದ ಬೆನ್ನಲ್ಲೇ ಕಾಳಗಿ ಎಸ್ಸೈ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಜಿಲ್ಲಾ ಎಸ್ಪಿ  ಸಿಮಿ ಮರಿಯಮ್ ಜಾರ್ಜ್ ಈ ಬಗ್ಗೆ ಆದೇಶ ಹೊರಡಿಸಿದ್ದು, ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಎಸ್ಸೈ ಬಸವರಾಜ ಚಿತಕೋಟೆ, ಎಎಸ್ಸೈ ನೀಲಕಂಠಪ್ಪ ಹೆಬ್ಬಾಳ, ಮತ್ತು ಬೀಟ್ ಪೊಲೀಸ್ ಕಾನ್ಸ್​ಟೇಬಲ್​​​ಗಳಾದ ಶರಣಪ್ಪ ಹಾಗೂ ಅನಿಲ್ ಭಂಡಾರಿ ಎಂಬುವರನ್ನು ಅಮಾನತುಗೊಳಿಸಲಾಗಿದೆ.

ಜೊತೆಗೆ ಸಿಪಿಐ ಭೋಜರಾಜ ರಾಠೋಡ ಅಮಾನತಿಗೂ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿರುವುದಾಗಿ ಎಸ್ಪಿ  ಜಾರ್ಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News