×
Ad

49 ಮಂದಿ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ಸ್ಥಳ ನಿಯುಕ್ತಿ

Update: 2020-09-12 19:02 IST

ಬೆಂಗಳೂರು, ಸೆ. 12: ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಗೆ ಸೇರಿದ ಒಟ್ಟು 49 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

ಕುಮಾರ್ ಎಸ್.ಬಿ-ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು, ಬಸವರಾಜ ಪಿ.-ನಗರ ಭೂ ಸಾರಿಗೆ ನಿರ್ದೇಶನಾಲಯ ಬೆಂಗಳೂರು, ಮೋಹನ್ ಆರ್.ಕೆ- ಬಿಡಿಎ ಬೆಂಗಳೂರು, ಗಂಗಾಧರ್ ಕೆ.ಪಿ- ನಗರಾಭಿವೃದ್ಧಿ ಇಲಾಖೆ, ರೇಣುಕಯ್ಯ ಕೆ.ಆರ್- ಜಲಸಂಪನ್ಮೂಲ ಇಲಾಖೆ, ಮಂಜುನಾಥ್-ಜಲಸಂಪನ್ಮೂಲ ಇಲಾಖೆ, ಗಂಗಾಧರ್ ಕೊಡಲಿಯವರ್- ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಬೆಂಗಳೂರು, ರೇಣುಕಾ ಆರಾಧ್ಯ-ಜಲಸಂಪನ್ಮೂಲ ಇಲಾಖೆ, ಡೊಂಕಪ್ಪ ಡಿ.ವಿ-ನಗರಾಭಿವೃದ್ದಿ ಇಲಾಖೆ ಸೇರಿದಂತೆ ಒಟ್ಟು 49 ಮಂದಿಯನ್ನು ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News