ಕ್ಯಾಸಿನೋದಲ್ಲಿ ರಾಜಕೀಯ ಚರ್ಚೆ ಮಾಡಬಾರದು ಎಂಬ ನಿಯಮವಿದೆಯೇ: ಬಸವರಾಜ್ ಹೊರಟ್ಟಿ ಪ್ರಶ್ನೆ

Update: 2020-09-12 18:07 GMT

ಹುಬ್ಬಳ್ಳಿ, ಸೆ.12: ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದು ಎಂಬ ನಿಯಮವಿದೆಯೇ. ರಾಜಕೀಯ ಉದ್ದೇಶವಾಗಿ ಹೋಗಿರುತ್ತಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರು, ಮಾಜಿ ಶಾಸಕರು ಕೊಲಂಬೋದ ಪ್ರವಾಸಕ್ಕೆ ಹೋಗಿದ್ದು ನಿಜ. ಈ ವೇಳೆ ಕ್ಯಾಸಿನೋಗೂ ಹೋಗಿರಬಹುದು. ಆದರೆ ಯಾರು ಹೋಗಿದ್ದಾರೆ ಅವರಿಗೇ ಗೊತ್ತು. ನಾನು ಹೋಗಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಚುನಾವಣೆ ಇತ್ತು. ಹೀಗಾಗಿ ನಾನು ಹೋಗಿರಲಿಲ್ಲ. ಈಗ ಕೊಲಂಬೋ ಪ್ರವಾಸದ ವಿಚಾರ ಹೊರಗೆ ಬಂದಿದೆ. ಬಹಳ ಜನರು ಹೋಗಿ ಬಂದಿದ್ದಾರೆ. ಕುಮಾರಸ್ವಾಮಿ ತಪ್ಪು ಸರಿನೋ ನೇರವಾಗಿ ಹೇಳುತ್ತಾರೆ ಎಂದರು.

ಕುಮಾರಸ್ವಾಮಿ ಅವರು ಹೇಳುವ ಧೈರ್ಯ ಮಾಡಿದ್ದಾರೆ, ಅದನ್ನ ಮೆಚ್ಚಲೇಬೇಕು. ಗಾಂಜಾ ಡ್ರಗ್ಸ್ ವಿಚಾರದಲ್ಲಿ ಒಮ್ಮೆ ಎಲ್ಲರ ಹೆಸರು ಬಯಲಿಗೆ ಬಂದು ಬಿಡಲಿ. ಆಗ ಎಲ್ಲವೂ ಸರಿ ಆಗುತ್ತದೆ. ನಮ್ಮನ್ನು ಸಹ ಕೊಲಂಬೋ ಪ್ರವಾಸಕ್ಕೆ ಕರೆದಿದ್ದರು. ಆದರೆ ನಾನು ಹೋಗಿರಲಿಲ್ಲ. ರಾಜಕೀಯ ಚರ್ಚೆ ಮಾಡಲು ಹೋಗಿದ್ದರು ಎಂದು ಸ್ಪಷ್ಟಪಡಿಸಿದರು.

ಈ ಕುರಿತು ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಪ್ರತಿಕ್ರಿಯಿಸಿ, ನಾನು ಶಾಸಕನಾದ ವೇಳೆ ಜೆಡಿಎಸ್ ಶಾಸಕರು ಕ್ಯಾಸಿನೊಗೆ ಪ್ರವಾಸ ಹೋಗಿದ್ದು ನಿಜ. ಆಗ ನನಗೂ ಕರೆದರು ನಾನು ಹೋಗಿರಲಿಲ್ಲ. ನನ್ನ ಕ್ಷೇತ್ರದಲ್ಲೆ ಉಳಿದಿದ್ದೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಟ್ವೀಟ್ ಮೂಲಕ ಹೇಳಿದ್ದಾರೆ. ಕ್ಯಾಸಿನೋಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರು ಹೋಗಿದ್ದರು. ರಾಜಕೀಯ ಚರ್ಚೆ ಮಾಡಲು ಕೊಲಂಬೋಗೆ ಹೋಗಿದ್ದು ಸತ್ಯ. ಒಂದು ಬಾರಿ ಪ್ರವಾಸ ರದ್ದಾಗಿತ್ತು. ಇನ್ನೊಮ್ಮೆ ಎಲ್ಲರೂ ಹೋಗಿದ್ದು ಸತ್ಯ. ಒಂದು ರಾಜಕೀಯ ಪಕ್ಷ ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದೆಂದು ನಿಯಮವಿದೆಯೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News