ಸಾಹಿತಿ ಕೊಟ್ರೇಶ್ ಉಪ್ಪಾರ್ ಗೆ ದಿ. ಗೋವಿಂದದಾಸ್ ರಾಜ್ಯ ಪ್ರಶಸ್ತಿ

Update: 2020-09-12 18:20 GMT

ಹಾಸನ: ಮೊದಲ ತಲೆಮಾರಿನ ದಲಿತ ಕವಿ 'ದಿ. ಗೋವಿಂದದಾಸ್’ ಹೆಸರಿನಲ್ಲಿ ನಾಗಭೂಮಿ ವಿವಿದೋದ್ದೇಶ ಅಭಿವೃದ್ದಿ ಸಂಸ್ಥೆ ವತಿಯಿಂದ ನೀಡಲಾಗುವ  ರಾಜ್ಯ ಮಟ್ಟದ ಪ್ರಶಸ್ತಿ ಈ ಬಾರಿ ಸಾಹಿತಿ, ಸಂಘಟಕ ಹಾಸನದ ಕೊಟ್ರೇಶ್ ಎಸ್.ಉಪ್ಪಾರ್ ಅವರಿಗೆ ಲಭಿಸಿದೆ.

ಕವಿ ಸುಬ್ಬು ಹೊಲೆಯಾರ್ ಅವರ ನೇತೃತ್ವದ ಆಯ್ಕೆ ಸಮಿತಿ ಕೊಟ್ರೇಶ್ ಉಪ್ಪಾರ್ ಅವರ ಕಾವ್ಯ, ಗದ್ಯ ಹಾಗೂ ಸಾಹಿತ್ಯ ಸಂಘಟನೆ ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ.  

ಪ್ರಶಸ್ತಿ 5 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದ್ದು, ಅಕ್ಟೋಬರ್ 4ರಂದು ಹಾಸನದಲ್ಲಿ ನಡೆಯುವ ಗೋವಿಂದ ದಾಸ್ ನೆನಪು ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಮೊದಲ ದಲಿತ ತಲೆಮಾರಿನ ಕವಿ ಗೋವಿಂದದಾಸ್ ಹೆಸರಲ್ಲಿ ಅಪರ ಪುತ್ರ ನಿರಂಜನ್ ದಾಸ್ ರಾಜಬಾನ್ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಗೋವಿಂದದಾಸ್ ಅವರ ನೆನಪಿನ ಕಾರ್ಯಕ್ರಮದ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ನಾಗರಾಜ್ ಹೆತ್ತೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News