×
Ad

ಎಎಜಿ ಅರುಣ್ ಶ್ಯಾಮ್ ನೇಮಕವನ್ನು ರದ್ದುಗೊಳಿಸಿಸಲು ಒತ್ತಾಯ

Update: 2020-09-13 23:08 IST

ಬೆಂಗಳೂರು, ಸೆ. 13: ವಕೀಲ ಅರುಣ ಶ್ಯಾಮ ಅವರನ್ನು ರಾಜ್ಯ ಸರಕಾರವು ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ನೇಮಕ ಮಾಡಿರುವ ವಿಚಾರ ಆಘಾತ ತಂದಿದ್ದು, ರಾಘವೇಶ್ವರ ಶ್ರೀಗಳ ಅತ್ಯಾಚಾರದ ಪ್ರಕರಣದಲ್ಲಿ ಇವರ ಹೆಸರೂ ದಾಖಲಾಗಿದೆ ಹಾಗೂ ಶ್ರೀಗಳ ಪ್ರಕರಣದಲ್ಲಿ 14 ನ್ಯಾಯಾಧೀಶರುಗಳು ಪೀಠದಿಂದ ಹಿಂದೆ ಸರಿದಿದ್ದಾರೆ. ಈ ಕೂಡಲೇ ನೇಮಕ ಆದೇಶವನ್ನು ರದ್ದುಪಡಿಸಬೇಕೆಂದು ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ ಸಂಘಟನೆಯವರು ಒತ್ತಾಯಿಸಿದ್ದಾರೆ.

ರಾಜ್ಯ ಅಡ್ವಕೇಟ್ ಜನರಲ್ ಹುದ್ದೆಯೆಂದರೆ ಅತ್ಯಂತ ಗೌರವಾನ್ವಿತ ಹುದ್ದೆ. ಜಾತಿ, ಧರ್ಮ, ಲಿಂಗ, ವರ್ಗವನ್ನು ನೋಡದೆ, ಸಂತ್ರಸ್ತರಿಗೆ ನ್ಯಾಯ ಕೊಡಿಸುವಾಗ ರಾಜ್ಯ ಸರಕಾರವನ್ನು ಪ್ರತಿನಿಧಿಸು ಹುದ್ದೆ. ಇಂಥ ಜವಾಬ್ದಾರಿಯುತ ಹುದ್ದೆಗೆ ಒಂದು ಪ್ರಕರಣದಲ್ಲಿ ಸಿಲುಕಿರುವ ವ್ಯಕ್ತಿಯ ನೇಮಕವೇ? ರಾಜ್ಯದಲ್ಲಿರುವ ಮಹಿಳೆಯರು ಇವರಿಂದ ಯಾವ ರೀತಿಯ ನ್ಯಾಯವನ್ನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ.

ನ್ಯಾಯ ದೊರೆಯುವ ವಿಶ್ವಾಸದ ಬುಡಕ್ಕೆ ದೊಡ್ಡ ಕೊಡಲಿಯೇಟು ಬಿದ್ದಿದೆ. ಹೆಣ್ಣನ್ನು ದೇವತೆಯನ್ನೆವವರೇ, ತಮಗೆ ಹೆಣ್ಣಿನ ಬಗ್ಗೆ ಸ್ವಲ್ಪವಾದರೂ ಗೌರವವೆಂಬುದು ಇದ್ದುದಾದರೆ, ಈ ಕೂಡಲೇ ಅರುಣ ಶ್ಯಾಮ ಅವರ ನೇಮಕಾತಿಯನ್ನು ಹಿಂತೆಗೆದುಕೊಳ್ಳಿ ಎಂದು ಸಂಘಟನೆ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News