ಕಸಾಪ ಬೈಲಾಗೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಾಪಸ್

Update: 2020-09-15 17:54 GMT

ಬೆಂಗಳೂರು, ಸೆ.15: ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ಕಾರ್ಯಕಾರಿ ಸಮಿತಿ ಅಧಿಕಾರದ ಅವಧಿ ವಿಸ್ತರಣೆ ವಿರೋಧಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಮೊಕದ್ದಮೆಯನ್ನು ಅರ್ಜಿದಾರರು ಹಿಂಪಡೆದಿದ್ದು, ಇದರಿಂದ, ಅಧ್ಯಕ್ಷರ ಚುನಾವಣೆಗೆ ಇದ್ದ ಸಮಸ್ಯೆಯೊಂದು ನಿವಾರಣೆಯಾದಂತಾಗಿದೆ.

ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಕೋ.ವೆಂ.ರಾಮಕೃಷ್ಣೇಗೌಡ ಅವರು, ಕಸಾಪ ಹಾಲಿ ಕಾರ್ಯಕಾರಿ ಸಮಿತಿ ಬೈಲಾಗೆ ತಿದ್ದುಪಡಿ ತಂದು ಅಧಿಕಾರಾವಧಿಯನ್ನು 3 ರಿಂದ 5 ವರ್ಷಗಳಿಗೆ ವಿಸ್ತರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ತಿದ್ದುಪಡಿ ಅನ್ವಯ ಅಧ್ಯಕ್ಷರ ಅಧಿಕಾರದ ಅವಧಿ ಮುಂದಿನ ವರ್ಷ ಮಾರ್ಚ್‍ಗೆ ಪೂರ್ಣಗೊಳ್ಳಲಿದೆ. ಆದರೆ, ಈಗಿರುವ ಬೈಲಾದ ಪ್ರಕಾರ ಅನಿವಾರ್ಯ ಸ್ಥಿತಿಯಲ್ಲಿ ಕಾರ್ಯಕಾರಿ ಸಮಿತಿಯ ಅವಧಿಯನ್ನು 6 ತಿಂಗಳು ವಿಸ್ತರಿಸಿಕೊಳ್ಳಲು ಸಮಿತಿಗೆ ಅವಕಾಶವಿದೆ. ಅರ್ಜಿಯನ್ನು ಪರಿಷತ್ತಿನ ಹಿತದೃಷ್ಟಿಯಿಂದ ಹಿಂದಕ್ಕೆ ಪಡೆದುಕೊಂಡಿದ್ದೇನೆ. ಹೀಗಾಗಿ, ಈ ಕೂಡಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಕೋ.ವೆಂ.ರಾಮಕೃಷ್ಣೇಗೌಡ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News