×
Ad

ಎಂ.ಎಚ್.ಆರ್.ಡಿ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

Update: 2020-09-16 23:31 IST

ಬೆಂಗಳೂರು, ಸೆ.16: ಕೇಂದ್ರ ಸರಕಾರದ Direct Benefit Transfer (DBT) Programme ಅಡಿಯಲ್ಲಿ ಎಂ.ಎಚ್.ಆರ್.ಡಿ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಅವರ ಪ್ರಥಮ ನವೀಕರಣಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಸಂಬಂಧವಾಗಿ ಕೇಂದ್ರ ಸರಕಾರದ ವತಿಯಿಂದ website: www.scholarships.gov ನ National e-Scholarship Portal ನಲ್ಲಿ ಹೊಸ ತಂತ್ರಾಂಶವನ್ನು ಅಳವಡಿಸಲಾಗಿರುತ್ತದೆ. ಆದಕಾರಣ, 2019ನೇ ಸಾಲಿನಲ್ಲಿ ಎಂ.ಎಚ್.ಆರ್.ಡಿ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಥಮ ನವೀಕರಣದ ನಿಮಿತ್ತ ಈ ಪೋರ್ಟಲ್‍ನಲ್ಲಿಯೇ ಅ.31 ರೊಳಗೆ ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕಿರುತ್ತದೆ.

ಇಲಾಖಾ ವೆಬ್‍ಸೈಟ್‍ನಲ್ಲಿಯೂ ಕೂಡ 2019ನೇ ಸಾಲಿನಲ್ಲಿ ಆಯ್ಕೆಗೊಂಡಿರುವ ವಿದ್ಯಾರ್ಥಿಗಳಿಗೆ online ಮೂಲಕ ಪ್ರಥಮ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಕುರಿತು ಸುತ್ತೋಲೆಯನ್ನು ಅಳವಡಿಸಲಾಗಿದೆ. ಪ್ರಥಮ ನವೀಕರಣ ಹಾಗೂ ಇನ್ನು ಮುಂದಿನ ನವೀಕರಣಗಳಿಗೆ ಆಧಾರ್ ಸಂಖ್ಯೆಯನ್ನು ಪಡೆದು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿರುವುದು. ಪ್ರಾಚಾರ್ಯರುಗಳು/ಸಂಸ್ಥೆಯವರು ಅರ್ಹ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸುವ/ತಿರಸ್ಕರಿಸುವ ಕಾರ್ಯವನ್ನು ತಮ್ಮ ಹಂತದಲ್ಲಿಯೇ ನಿರ್ವಹಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News