ಬೆಳೆ ಸಮೀಕ್ಷೆ: 'ಬೆಳೆ ದರ್ಶಕ್ ಆ್ಯಪ್'ನಲ್ಲಿ ತಿದ್ದುಪಡಿಗೆ ಅವಕಾಶ

Update: 2020-09-18 17:10 GMT

ಬೆಂಗಳೂರು, ಸೆ. 18: ರೈತರೇ ಸ್ವತಃ ತಮ್ಮ ಜಮೀನಿನ ಬಗ್ಗೆ ತಾವೇ ಪ್ರಮಾಣಪತ್ರ ನೀಡುವ ರೈತ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿಯಾಗಿದ್ದು, ಶುಕ್ರವಾರ ಸೆ.18 ಮಧ್ಯಾಹ್ನದವರೆಗೆ 1 ಕೋಟಿ 2 ಲಕ್ಷದ 90 ಸಾವಿರ ಪ್ಲಾಟ್‍ಗಳು ಆ್ಯಪ್‍ಗೆ ಅಪ್ಲೋಡ್ ಆಗಿವೆ. ಹೀಗೆ ಅಪ್ಲೋಡ್ ಮಾಡಿದ ಬೆಳೆ ಸಮೀಕ್ಷೆಯ ವಿವರಗಳನ್ನು ರೈತರು ಪಡೆಯಲು ಕೃಷಿ ಇಲಾಖೆ ಮತ್ತೊಂದು ಆ್ಯಪ್ ಅನ್ನು ಬಿಡುಗಡೆ ಮಾಡಿದೆ.

'ಬೆಳೆ ದರ್ಶಕ್-2020' ಹೆಸರಿನ ಈ ಆ್ಯಪ್ ಮೂಲಕ ರೈತರು ಅಪ್ಲೋಡ್ ಆಗಿರುವ ತಮ್ಮ ಬೆಳೆಯ ವಿವರಗಳ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ, ಬೆಳೆ ದರ್ಶಕ್-2020 ಆ್ಯಪ್ ಮೂಲಕ ಅಪ್ಲೋಡ್ ಆದ ವಿವರಗಳು ಸರಿಯಾಗಿವೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ರೈತರಾಗಲೀ ಅಥವಾ ಖಾಸಗಿ ನಿವಾಸಿಗಳು ಒಂದು ವೇಳೆ ಬೆಳೆ ಸಮೀಕ್ಷೆ ಮಾಹಿತಿಯನ್ನು ತಪ್ಪಾಗಿ ದಾಖಲಿಸಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಬೆಳೆ ದರ್ಶಕ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕೃಷಿ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಬಳಕೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಲು ಹೊಸಹೊಸ ಹೆಜ್ಜೆಗಳನ್ನು ಇಡುತ್ತಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂತಹ ಮತ್ತೊಂದು ಮಹತ್ವದ `ಬೆಳೆ ದರ್ಶಕ್-2020' ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಿದರು. ಸೆ.23ಕ್ಕೆ ಬೆಳೆ ಸಮೀಕ್ಷೆ ಅಪ್ಲೋಡ್ ಮಾಡಲು ಕೊನೆಯ ದಿನವಾಗಿದ್ದು, ರೈತರು ಆದಷ್ಟು ಬೇಗ ತಮ್ಮ ಜಮೀನಿನ ಸಮೀಕ್ಷೆ ಅಪ್ಲೋಡ್ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News