ಅನ್‍ಲಾಕ್ 4.0 ಬಳಿಕ ರಾಜ್ಯದಲ್ಲಿ ಮದ್ಯ ವಹಿವಾಟು ಹೆಚ್ಚಳ

Update: 2020-09-19 17:13 GMT

ಬೆಂಗಳೂರು, ಸೆ.19: ಅನ್‍ಲಾಕ್ 4.0 ಜಾರಿಗೊಂಡ ಬಳಿಕ ರಾಜ್ಯದಲ್ಲಿ ಮದ್ಯ ವಹಿವಾಟು ಏರಿಕೆಯಾಗಿದ್ದು, ಆರ್ಥಿಕ ಸಂಕಷ್ಟದಿಂದ ನಲುಗಿದ್ದ ಸರಕಾರಕ್ಕೆ ತುಸು ನೆಮ್ಮದಿ ಸಿಕ್ಕಿದಂತಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 9,599 ಕೋಟಿ ರೂ. ಆದಾಯ ಹರಿದು ಬಂದಿತ್ತು. ಆದರೆ, ಈ ಬಾರಿ ಇದೇ ಅವಧಿಯ ಸೆ.9ರವರೆಗೆ 8,468 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,130 ಕೋಟಿ ರೂ. ಆದಾಯ ನಷ್ಟವಾಗಿದೆ.

ರಾಜ್ಯದಲ್ಲಿ ಮಾ.23ರಿಂದ ಮೇ 3ರವರೆಗೆ ಅಂದರೆ 42 ದಿನ ಲಾಕ್‍ಡೌನ್ ಮಾಡಲಾಗಿತ್ತು. ಇದರಿಂದ ಇಲಾಖೆಗೆ ಅಂದಾಜು 3 ಸಾವಿರ ಕೋಟಿ ರೂ. ಆದಾಯ ನಷ್ಟವಾಗಿತ್ತು. ಮೇ 4ರಿಂದ ಸಿಎಲ್2 ಹಾಗೂ ಸಿಎಲ್11ಸಿ ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ರಾಜ್ಯಾದ್ಯಂತ ಮದ್ಯ ವಹಿವಾಟು ಜೋರಾಗಿ ನಡೆಯಿತು.

ಬಳಿಕ, ಆನ್‍ಲಾಕ್ 4.0 ಜಾರಿಯಾದ ಹಿನ್ನೆಲೆಯಲ್ಲಿ 5 ತಿಂಗಳಿಂದ ಮುಚ್ಚಲಾಗಿದ್ದ ಬಾರ್, ಪಬ್ ಹಾಗೂ ಕ್ಲಬ್‍ಗಳಲ್ಲಿ ಸೆ.1ರಿಂದ ಆಹಾರದೊಂದಿಗೆ ಮದ್ಯ ಕುಡಿಯಲು ಅನುಮತಿ ನೀಡಿದ್ದರಿಂದ ಮದ್ಯ ವಹಿವಾಟಿನಲ್ಲಿ ತುಸು ಚೇತರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News