ಸೆ.21ರಿಂದ ಸ್ನಾತಕೋತ್ತರ ಪರೀಕ್ಷೆ ಆರಂಭ: ಮುಂಜಾಗ್ರತಾ ಕ್ರಮವಾಗಿ ಔಷಧ ಸಿಂಪಡಣೆ

Update: 2020-09-20 13:13 GMT

ಬೆಂಗಳೂರು, ಸೆ. 20: ಬೆಂಗಳೂರು ನಗರ ವಿಶ್ವವಿದ್ಯಾಲಯ ಸ್ನಾತಕೋತ್ತರ ಪರೀಕ್ಷೆಗಳು ನಾಳೆ(ಸೆ.21)ಯಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಕೊರೋನ ಮುಂಜಾಗ್ರತಾ ಕ್ರಮವಾಗಿ ವಿವಿ ವ್ಯಾಪ್ತಿಯ ಎಲ್ಲ ತರಗತಿ ಕೊಠಡಿಗಳನ್ನು ಶುಚಿಗೊಳಿಸಿ ಔಷಧವನ್ನು ಸಿಂಪಡಿಸಲಾಯಿತು.

ಔಷಧ ಸಿಂಪಡಣೆಗೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಚಾಲನೆ ನೀಡಿ ಮಾತನಾಡಿ, ಕೊರೋನ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಅದರ ಮಧ್ಯೆ ಪರೀಕ್ಷೆಗಳು ನಡೆಸಲೇಬೇಕಾದ ಅನಿವಾರ್ಯತೆ ಎದುರಾದ ಹಿನ್ನೆಲೆಯಲ್ಲಿ ವಿವಿ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಔಷಧ ಸಿಂಪಡಣೆ ಮಾಡಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುವಾಗ ತಪ್ಪದೇ ಮಾಸ್ಕ್ ಬಳಸಬೇಕು ಮತ್ತು ವಿಶ್ವವಿದ್ಯಾನಿಲಯದ ದ್ವಾರಗಳಲ್ಲಿ ತಪಾಸಣೆಗೆ ಒಳಪಟ್ಟು ಅಂತರ ಕಾಪಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಡಾ.ರಮೇಶ್, ಕುಲಸಚಿವ ಡಾ.ಶಿವರಾಂ, ವಿತ್ತಧಿಕಾರಿ ವೆಂಕಟೇಶ ಮೂರ್ತಿ ಹಾಗೂ ಎನ್ನೆಸ್ಸೆಸ್ ಸಂಯೋಜನಾಧಿಕಾರಿಗಳಾದ ಡಾ.ಎಚ್.ಜಿ.ಗೋವಿಂದ ಗೌಡ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News