ಶಿವಮೊಗ್ಗ: ಸರಣಿ ಕಳ್ಳತನ; ಆರೋಪಿಗಳ ಬಂಧನ

Update: 2020-09-20 15:54 GMT

ಶಿವಮೊಗ್ಗ: ನಗರದಲ್ಲಿ ಕಳೆದ ಜನವರಿಯಿಂದ ಸರಣಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 90 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಎಎ ಕಾಲೊನಿ ನಿವಾಸಿಗಳಾದ ಸಂತೋಷ್ ಅಲಿಯಾಸ್ ಮೋಟ (22), ಉಮೇಶ್ ಅಲಿಯಾಸ್ ಕಡ್ಡಿ (20) ಬಂಧಿತರು. 10 ಗ್ರಾಂನ ಒಂದು ಚಿನ್ನದ ಸರ, 2 ಮೊಬೈಲ್ ಫೋನ್, 2 ಗ್ಯಾಸ್ ಸಿಲಿಂಡರ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಆಗಸ್ಟ್ 24ರಂದು ವಿನೋಬನಗರದ ಮುನಿಸಿಪಲ್ ಪಾರ್ಕ್ನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಅವರಿಂದ 10 ಗ್ರಾಂ ಚಿನ್ನದ ಸರ ದೋಚಿದ್ದರು. 

ಏಪ್ರಿಲ್ 3 ಮತ್ತು ಜುಲೈ 30ರಂದು ಎಪಿಎಂಸಿ ಮಾರ್ಕೆಟ್‌ನಲ್ಲಿ ಮೊಬೈಲ್ ಕಳವು ಮಾಡಿದ್ದರು. ಜನವರಿ 10ರಂದು ಆಲ್ಕೊಳದ ಮಂಗಳ ಮಂದಿರ ರಸ್ತೆಯಲ್ಲಿನ ಮನೆಯೊಂದರಲ್ಲಿ 2 ಗ್ಯಾಸ್ ಸಿಲಿಂಡರ್‌ಗಳನ್ನು ಕಳವು ಮಾಡಿದ್ದರು. 

ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ವೃತ್ತದ ಸಿಪಿಐ ವಸಂತ್ ಕುಮಾರ್ ನೇತೃತ್ವದಲ್ಲಿ ವಿನೋಬ ನಗರ ಠಾಣೆ ಪಿಎಸ್‌ಐ ಉಮೇಶ್ ಕುಮಾರ್, ಸಿಬ್ಬಂದಿಯೊನ್ನೊಳಗೊಂಡ ತಂಡ ರಚಿಸಿ ಕಾರ್ಯಾಚರಣೆ ಮಾಡಲಾಗಿತ್ತು. 

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News