ಸೆ.28ರಿಂದ ವಿವಿಧ ಹಂತಗಳಲ್ಲಿ ಕೋರ್ಟ್ ಭೌತಿಕ ಕಲಾಪ ಆರಂಭ

Update: 2020-09-20 16:16 GMT

ಬೆಂಗಳೂರು, ಸೆ. 20: ರಾಜ್ಯದ ಕೋರ್ಟ್‍ಗಳ ಕಲಾಪಗಳು ಹಂತ-ಹಂತವಾಗಿ ಪುನರಾರಂಭವಾಗಲಿವೆ. ಹೈಕೋರ್ಟ್ ಹೊರಡಿಸಿರುವ ವಿಶೇಷ ಮಾರ್ಗದರ್ಶಿ ಸೂತ್ರಗಳ(ಎಸ್‍ಒಪಿ) ಅನುಸಾರ 55 ತಾಲೂಕು ಕೋರ್ಟ್‍ಗಳಲ್ಲಿ ಸೆ.28ರಿಂದ ಸಾಕ್ಷಿಗಳ ವಿಚಾರಣೆಯೂ ಆರಂಭವಾಗಲಿದೆ.
ಕೋರ್ಟ್‍ಗೆ ಹಾಜರಾಗುವ ಸಾಕ್ಷಿದಾರರು ಅಂದೇ ಕೊರೋನ ಪರೀಕ್ಷೆ ನಡೆಸಿದ ವರದಿ(ನೆಗೆಟಿವ್) ಮತ್ತು ನ್ಯಾಯಾಲಯ ಹೊರಡಿಸಿರುವ ಸಮನ್ಸ್ ನೊಂದಿಗೆ ಹಾಜರಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಹೊರಡಿಸಿರುವ ಎಸ್‍ಒಪಿಯಲ್ಲಿ ದಾಖಲಿಸಲಾಗಿದೆ.

ಆರೋಪಿಗಳು ಮತ್ತು ಸಾಕ್ಷ್ಯದಾರರು ಮಾತ್ರ ಹಾಜರಾಗಲು ಅವಕಾಶ ಇದೆ. ಅನಗತ್ಯವಾಗಿ ದೂರದಾರರ ಹಾಜರಾತಿಯನ್ನು ಎಸ್‍ಒಪಿಯಲ್ಲಿ ನಿರ್ಬಂಧಿಸಲಾಗಿದೆ. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಯಚೂರು, ಬೀದರ್, ರಾಮನಗರ, ಉಡುಪಿ, ಗದಗ, ಕೊಡಗು, ಕೊಪ್ಪಳ, ಚಾಮರಾಜನಗರ ಮತ್ತು ಯಾದಗಿರಿ ಸೇರಿ 13 ಜಿಲ್ಲಾ ನ್ಯಾಯಾಲಯಗಳು ಅ.5ರಂದು ಮತ್ತು ಉಳಿದ ಎಲ್ಲ ಜಿಲ್ಲಾ ನ್ಯಾಯಾಲಯಗಳು ಅ.12ರಂದು ಆರಂಭವಾಗಲಿವೆ. ಪ್ರತಿ ನ್ಯಾಯಾಲಯಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 15 ಪ್ರಕರಣಗಳ ವಿಚಾರಣೆ ನಡೆಸಬೇಕು ಎಂದು ಎಸ್‍ಒಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News