ಓ ಮೆಣಸೇ...

Update: 2020-09-20 19:30 GMT

ಯಾರ ಬಗ್ಗೆಯಾದರೂ ತಪ್ಪಾಗಿ ನಡೆದುಕೊಂಡಿದ್ದರೆ ನೇಣು ಹಾಕಿಕೊಳ್ಳಲು ತಯಾರಿದ್ದೇನೆ - ವಿ.ಸೋಮಣ್ಣ, ಸಚಿವ
ಯಾರ ಬಗ್ಗೆ ನೇಣು ಹಾಕಿಕೊಳ್ಳುವಂತಹ ತಪ್ಪು ಮಾಡಿದ್ದೀರಿ ಎನ್ನುವುದನ್ನು ನ್ಯಾಯಾಲಯದ ಮುಂದೆ ಹೇಳಿಕೊಳ್ಳಿ. ನ್ಯಾಯಾಲಯ ಸಹಾಯ ಮಾಡುತ್ತದೆ.


ಬಿಜೆಪಿಯ ದೊಡ್ಡ ನಾಯಕರು ಅಫೀಮು ತೆಗೆದುಕೊಳ್ಳದೆ ಹೊರಗೆ ಬರುವುದಿಲ್ಲ - ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ

ಕೋಮುವಾದದ ಅಫೀಮು ಹಂಚಿಯೇ ಅವರು ಅಧಿಕಾರಕ್ಕೆ ಬಂದಿರುವುದು.


ಅಧಿಕಾರಕ್ಕಾಗಿ, ಹಣ ಮಾಡಲು ನಾನು ರಾಜಕೀಯಕ್ಕೆ ಬಂದಿಲ್ಲ. ಜನಸೇವೆಗೆ ಬಂದಿದ್ದೇನೆ - ಎಂ.ಟಿ.ಬಿ.ನಾಗರಾಜ್, ವಿ.ಪ. ಸದಸ್ಯ
ರಾಜಕೀಯಕ್ಕೆ ಬಂದರೆ ಜನಸೇವೆ ಮಾಡುವುದಕ್ಕಾಗುತ್ತದೆ ಎಂದು ಹೇಳಿದವರು ಯಾರು?


ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ವುಡ್‌ಗಳಲ್ಲಿಯೂ ನಶೆ ಇದ್ದೇ ಇದೆ - ಬಿ.ಸಿ.ಪಾಟೀಲ್, ಸಚಿವ
ನೀವು ಸ್ಯಾಂಡಲ್‌ವುಡ್‌ನಲ್ಲಿ ತೆಗೆದುಕೊಂಡ ನಶೆ ಎಷ್ಟು ಎನ್ನುವುದನ್ನು ತಿಳಿಸಿ.


ಹಿಂದಿ ಭಾಷೆಯ ಬಹುದೊಡ್ಡ ಶಕ್ತಿಯೆಂದರೆ ಅದರ ವೈಜ್ಞಾನಿಕತೆ, ತಾಜಾತನ ಹಾಗೂ ಸರಳತೆ - ಅಮಿತ್ ಶಾ, ಕೇಂದ್ರ ಸಚಿವ
ಅದನ್ನೂ ಯಾಕೆ ನೀವು ವಿದೇಶಿ ಕಂಪೆನಿಗಳಿಗೆ ಮಾರಿ ಬಿಡಬಾರದು?


 ಈ ವರೆಗೆ ಅಕ್ಕಪಕ್ಕ ಅಂಟಿಕೊಂಡೇ ಸಂಸತ್‌ನಲ್ಲಿ ಕೂರುತ್ತಿದ್ದೆವು. ಮೊದಲ ಬಾರಿಗೆ ಅಂತರ ಕಾಯ್ದುಕೊಂಡು ಕೂರುತ್ತಿದ್ದೇವೆ- ಶೋಭಾ ಕರಂದ್ಲಾಜೆ, ಸಂಸದೆ
 ಯಾರ ಜೊತೆ ಎನ್ನುವುದನ್ನು ವಿವರಿಸಿ ಹೇಳಿ.


ಡ್ರಗ್ಸ್ ಹಿಂದೆಯೂ ಪಾಕ್-ಚೀನಾ ಕೈವಾಡ - ರವಿಕಿಶನ್, ಸಂಸದ
ಅಂದರೆ ನಿಮಗೆ ಡ್ರಗ್ಸ್ ಪೂರೈಸಿರುವುದು ಪಾಕಿಸ್ತಾನ ಮತ್ತು ಚೀನಾ ದೇಶವೇ?


ಪ್ರಧಾನಿ ಮೋದಿಯಿಂದ ಭಾರತದ ರಾಜಕೀಯ ಸಂಸ್ಕೃತಿ ಬದಲಾಗಿದೆ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಹೌದು...ಬದಲಾಗಿರುವುದು ನಿಜ.


ಚೀನಾ ಗಡಿಭಾಗದಲ್ಲಿ ಭಾರತದ ಸೇನೆ ಕಾವಲು ಕಾಯುವುದನ್ನು ಜಗತ್ತಿನ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ- ರಾಜನಾಥ್ ಸಿಂಗ್, ಕೇಂದ್ರ ಸಚಿವ
ಮತ್ತೆ ಹೇಗೆ ಚೀನಾ ಸೇನೆ ಭಾರತದ ಗಡಿ ದಾಟಿ ಬಂತು?


ಬಿಎಸ್‌ವೈ ಕಬಡ್ಡಿ ಆಟಗಾರ ಇದ್ದಂತೆ - ಆರ್. ಅಶೋಕ್, ಸಚಿವ
ಅದಕ್ಕಾಗಿ ಅವರ ಕಾಲೆಳೆಯುವುದೇ?


 ಡ್ರಗ್ಸ್ ಖರೀದಿಸುವವರು ಸಮಾಜ ದ್ರೋಹಿಗಳು - ನಳಿನ್ ಕುಮಾರ್ ಕಟೀಲು, ಸಂಸದ
 ಡ್ರಗ್ಸ್ ಮಾರುವವರು ದೇಶಪ್ರೇಮಿಗಳೇ?


ಡ್ರಗ್ಸ್ ಮಾಫಿಯಾದ ತನಿಖೆ ಯಾರ ಮನೆಯ ಬಾಗಿಲಿಗೆ ಬರುತ್ತದೋ ಗೊತ್ತಿಲ್ಲ - ಸಿ.ಟಿ.ರವಿ, ಸಚಿವ
ನಿಮ್ಮ ಕಾರು ಅಪಘಾತವಾದ ದಿನ ಢಿಕ್ಕಿಯನ್ನು ತೆರೆದು ಪರಿಶೀಲಿಸಿದ್ದಿದ್ದರೆ ಈಗಾಗಲೇ ಗೊತ್ತಾಗಿ ಬಿಡುತ್ತಿತ್ತು.


ಪ್ರಧಾನಿ ನರೇಂದ್ರ ಮೋದಿ ಒಬ್ಬ ಶ್ರೇಷ್ಠ ನಾಯಕ- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅಮೆರಿಕದ ಪಾಲಿಗೆ ಶ್ರೇಷ್ಠರಾದರೆ ಸಾಕೆ, ಭಾರತದ ಪಾಲಿಗೂ ಶ್ರೇಷ್ಠರಾಗಬೇಡವೇ?


ನಮ್ಮನ್ನು ಇಂಗ್ಲಿಷ್ ಇಲ್ಲವೇ ಹಿಂದಿ ಭಾಷೆಯಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ- ಟಿ.ಎಸ್.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಅದನ್ನು ತಡೆಯುವುದಕ್ಕೆ ನೀವೇನು ಮಾಡುತ್ತಿದ್ದೀರಿ ಹೇಳಿ.


ಅಮೆರಿಕದಲ್ಲಿ ಕಪ್ಪು ವರ್ಣೀಯರಿಗೊಂದು, ಬಿಳಿಯ ಅಮೆರಿಕನ್ನರಿಗೊಂದು ಎನ್ನುವ ಎರಡು ನ್ಯಾಯ ವ್ಯವಸ್ಥೆಗಳಿವೆ - ಕಮಲಾ ಹ್ಯಾರಿಸ್, ಅಮೆರಿಕ ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ
 ಭಾರತವನ್ನು ಅವರು ಮಾದರಿಯಾಗಿರಿಸಿಕೊಂಡಿದ್ದಾರೆ ಎಂದು ಕಾಣುತ್ತದೆ.


ನಮ್ಮ ಮಾತುಗಳಿಗೆ ಈಗ ವಿಶ್ವ ಮಾನ್ಯತೆ ಸಿಗುತ್ತಿದೆ- ನರೇಂದ್ರ ಮೋದಿ, ಪ್ರಧಾನಿ
ರೂಪಾಯಿಗೂ ಮಾನ್ಯತೆ ಸಿಗಬೇಡವೇ?


ನಾವು ಒಂದಿಂಚು ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ - ಜಹಾವೊ ಲಿಜಿಯಾನ್, ಚೀನಾ ವಿದೇಶಾಂಗ ವಕ್ತಾರ
ನೀವು ಭೂಮಿ ಕಬಳಿಸಿಯೇ ಇಲ್ಲ ಎಂದು ಮೋದಿಯವರು ಕ್ಲೀನ್ ಚಿಟ್ ನೀಡಿದ್ದಾರೆ. ಇನ್ನು ಬಿಟ್ಟುಕೊಡುವ ಪ್ರಶ್ನೆಯೆಲ್ಲಿ ಬಂತು?


ಅನುಭವ ಮತ್ತು ಅರ್ಹತೆ ಎರಡೂ ಇರುವ ನಾನೇಕೆ ಮಂತ್ರಿಯಾಗಬಾರದು - ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಆರೆಸ್ಸೆಸ್‌ನೊಳಗೆ ನಿಮಗಿರುವ ಅನುಭವ, ಅರ್ಹತೆ ಎಷ್ಟು ಎನ್ನುವುದರ ಮೇಲೆ ನಿಂತಿದೆ.


ಮೋದಿ ಸರಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ ಒದಗಿಸಲು ಕಟಬದ್ಧವಾಗಿದೆ - ಅಮಿತ್ ಶಾ, ಕೇಂದ್ರ ಸಚಿವ
ಪಕೋಡಾ ತಯಾರಿಯ ಕುರಿತಂತೆ ಇರಬಹುದೇ?


ಡ್ರಗ್ಸ್ ಮಾಫಿಯಾದಲ್ಲಿ ಕೇವಲ ನಟಿಯರ ಹೆಸರುಗಳು ಮಾತ್ರ ಯಾಕೆ ಕೇಳಿ ಬರುತ್ತವೆ - ಸುಮಲತಾ, ಸಂಸದೆ
 ಡ್ರಗ್ಸ್ ಮಾಫಿಯಾದಲ್ಲಿ ನಟರ ಜೊತೆಗೆ ಸ್ಪರ್ಧೆಗಿಳಿದ ಕಾರಣಕ್ಕಿರಬಹುದು.


ವಿವಿಗಳು ಈಗ ಸ್ವಾಮೀಜಿ ಇಲ್ಲದ ಮಠಗಳಂತಾಗಿವೆ- ಬಸವರಾಜ ಹೊರಟ್ಟಿ, ಮಾಜಿ ಸಚಿವ
ಒಟ್ಟಿನಲ್ಲಿ ವಿವಿಗಳು ಮಠಗಳು ಎನ್ನುವುದನ್ನು ನೀವು ಒಪ್ಪಿಕೊಂಡಿರಿ.


ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ಹತ್ತು ವರ್ಷ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿರಬೇಕು- ಎಸ್.ಎಲ್.ಭೈರಪ್ಪ, ಸಾಹಿತಿ

ಬಹುಶಃ ನಿಮಗೆ ತಿಂಗಳಿಗೆ ಬರುವ 70,000 ರೂಪಾಯಿಯ ಹಿತದೃಷ್ಟಿಯ ಕಾರಣಕ್ಕಿರಬೇಕು.


ಉಪಮುಖ್ಯಮಂತ್ರಿಯಾಗಬೇಕೆಂದು ಕೋರಿ ಗೋನಾಳದಲ್ಲಿರುವ ಗಡೇ ದುರ್ಗಾದೇವಿಗೆ ಪತ್ರ ಬರೆದಿದ್ದೇನೆ - ಶ್ರೀರಾಮುಲು, ಸಚಿವ
ಇಂಗ್ಲಿಷ್ ಅರ್ಥವಾಗುವುದಿಲ್ಲ, ಕನ್ನಡದಲ್ಲಿ ಪತ್ರ ಬರೆದು ಕಳುಹಿಸಿ ಎಂದು ದೇವಿ ಪತ್ರವನ್ನು ಪೂಜಾರಿ ಕೈಗೆ ವಾಪಸ್ ಕೊಟ್ಟಿದ್ದಾಳಂತೆ

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...