ಸೆ.21ರಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ

Update: 2020-09-20 18:12 GMT

ಬೆಂಗಳೂರು, ಸೆ. 20: ಕೊರೋನ ಸೋಂಕು ಹೆಚ್ಚಳದ ನಡುವೆ ನಡೆದಿದ್ದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶದಲ್ಲಿ ಉತ್ತೀರ್ಣರಾಗಲು ಅವಕಾಶ ಸಿಕ್ಕಿದ್ದು, ನಾಳೆ(ಸೆ.21) ಯಿಂದ ರಾಜ್ಯಾದ್ಯಂತ ಎಸೆಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿವೆ.

ಪೂರಕ ಪರೀಕ್ಷೆಗಳನ್ನು ನಡೆಸುವ ಸಂಬಂಧ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನಾಳೆಯಿಂದ ಆರಂಭವಾಗುವ ಪರೀಕ್ಷೆಗಳು ಸೆ.28 ರವರೆಗೂ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲ ಕಡೆಗಳಲ್ಲಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

ರಾಜ್ಯದಾದ್ಯಂತ ಪೂರಕ ಪರೀಕ್ಷೆಗೆ 2.13 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರ ಜತೆಗೆ ಜೂನ್/ಜುಲೈನಲ್ಲಿ ನಡೆದ ಎಸೆಸೆಲ್ಸಿ ಮುಖ್ಯ ಪರೀಕ್ಷೆಯಲ್ಲಿ ಕೊರೋನ ಭಯದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗದ 15075 ವಿದ್ಯಾರ್ಥಿಗಳು ಇದೀಗ ನೋಂದಾಯಿಸಿಕೊಂಡಿದ್ದು, ಇವರೆಲ್ಲರನ್ನೂ ಹೊಸ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುತ್ತದೆ. ರಾಜ್ಯದ 772 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಗುಣಾತ್ಮಕ ಪರೀಕ್ಷೆ ನಡೆಸಲು ಮಂಡಳಿ ಸಿದ್ಧತೆ ಕೈಗೊಂಡಿದೆ.

ವೇಳಾಪಟ್ಟಿ:
ಸೆ.21: ಗಣಿತ, ಸಮಾಜಶಾಸ್ತ್ರ
ಸೆ.22: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕøತಿ(ಪ್ರಥಮ ಭಾಷೆ)
ಸೆ.23: ಸಮಾಜ ವಿಜ್ಞಾನ
ಸೆ.24: ಇಂಗ್ಲೀಷ್, ಕನ್ನಡ(ದ್ವಿತೀಯ ಭಾಷೆ)
ಸೆ.25: ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪಾರ್ಸಿ, ಉರ್ದು, ಸಂಸ್ಕøತಿ, ಕೊಂಕಣಿ, ತುಳು(ತೃತೀಯ ಭಾಷೆ)
ಸೆ.26: ಅರ್ಥಶಾಸ್ತ್ರ
ಸೆ.28: ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಮ್ಯೂಸಿಕ್/ಹಿಂದೂಸ್ತಾನಿ ಮ್ಯೂಸಿಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News