ದೇಶದಲ್ಲಿ ಪ್ರಥಮ ಬಾರಿ ಯುದ್ಧ ನೌಕೆಯಲ್ಲಿ ನಿಯೋಜನೆಗೊಳ್ಳಲಿರುವ ಇಬ್ಬರು ಮಹಿಳಾ ಅಧಿಕಾರಿಗಳು

Update: 2020-09-21 11:07 GMT

ಹೊಸದಿಲ್ಲಿ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತೀಯ ನೌಕಾದಳಕ್ಕೆ ಸೇರಿದ ಯುದ್ಧನೌಕೆಯಲ್ಲಿ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರೀತಿ ಸಿಂಗ್ ನಿಯೋಜನೆಗೊಳ್ಳಲಿದ್ದಾರೆ. ಯುದ್ಧನೌಕೆಯೊಂದರಲ್ಲಿ ಮಹಿಳೆಯರ ನಿಯೋಜನೆ ಭಾರತದಲ್ಲಿ ಇದೇ ಮೊದಲ ಬಾರಿಯಾಗಿದೆ. ದೀರ್ಘಕಾಲ ಪ್ರಯಾಣ, ಖಾಸಗಿತನದ ಕೊರತೆ ಮತ್ತಿತರ ಕಾರಣಗಳನ್ನು ಮುಂದೊಡ್ಡಿ ಮಹಿಳಾ ಅಧಿಕಾರಿಗಳಿಗೆ ಅಲ್ಲಿ ಸೇವೆ ಸಲ್ಲಿಸುವ ಅವಕಾಶ ಇಲ್ಲಿಯ ತನಕ ಲಭ್ಯವಿರಲಿಲ್ಲ.

ನೌಕಾದಳದ ಈ ಇಬ್ಬರು ಯುವ ಅಧಿಕಾರಿಗಳು ನೌಕಾದಳದ ಹೆಲಿಕಾಪ್ಟರುಗಳ ಸೆನ್ಸರುಗಳ ನಿರ್ವಹಣೆಯಲ್ಲಿ ತರಬೇತಿ ಪಡೆಯುತ್ತಿದ್ದು ಮುಂದೆ ನೌಕಾದಳದ ಹೊಸ ಎಂಎಚ್-60ಆರ್ ಹೆಲಿಕಾಪ್ಟರುಗಳ ಹಾರಾಟವನ್ನು ಅವರು ಕೈಗೆತ್ತಿಕೊಳ್ಳಬಹುದು. ಇಬ್ಬರೂ ಸದರ್ನ್ ನೇವಲ್ ಕಮಾಂಡ್‍ನ  ಐಎನ್‍ಎಸ್ ಗರುಡಾ ವಾಯು ನೆಲೆಯಲ್ಲಿ ಸೋಮವಾರ ನೇವೀಸ್ ಒಬ್ಸವರ್ಸ್ ಕೋರ್ಸ್ ಪೂರ್ಣಗೊಳಿಸಿದ್ದಾರೆ.

ಕಂಪ್ಯೂಟರ್ ಸಾಯನ್ಸ್ ಇಂಜಿನಿಯರಿಂಗ್ ಪದವೀಧರೆಯರಾಗಿರುವ ಈ ಇಬ್ಬರೂ 2018ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿದ್ದರು.

ಸಬ್ ಲೆಫ್ಟಿನೆಂಟ್ ನೀತಿ ಸಿಂಗ್ ಹೈದರಾಬಾದ್‍ನವರಾಗಿದ್ದರೆ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಗಾಝಿಯಾಬಾದ್‍ನವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News