ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ: ನಟ ಯೋಗಿ ಸೇರಿ ಇಬ್ಬರ ವಿಚಾರಣೆ?
Update: 2020-09-21 21:55 IST
ಬೆಂಗಳೂರು, ಸೆ.21: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಒಂದು ಕಡೆ ಸಿಸಿಬಿ ತನಿಖೆ ಚುರುಕುಗೊಳಿಸಿದ್ದರೆ, ಮತ್ತೊಂದೆಡೆ ಆಂತರಿಕ ಭದ್ರತಾ ವಿಭಾಗದ (ಐಎಸ್‍ಡಿ) ಪೊಲೀಸರು ಡ್ರಗ್ಸ್ ಜಾಲದ ಪತ್ತೆಗೆ ಮುಂದಾಗಿದ್ದು, ನಟ ಯೋಗಿ ಸೇರಿ ಇಬ್ಬರ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಮಾದಕ ವಸ್ತು ಮಾರಾಟದಾರರು ನೀಡಿರುವ ಹೇಳಿಕೆ ಅನ್ವಯ ನಟ ಯೋಗಿ ಹಾಗೂ ಅಯ್ಯಪ್ಪ ಎಂಬವರಿಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಸೋಮವಾರ ಮಧ್ಯಾಹ್ನ ಸುಮಾರಿಗೆ ವಿಚಾರಣೆಗೆ ಕರೆದು, ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಐಎಸ್‍ಡಿ ಮೂಲಗಳು ತಿಳಿಸಿವೆ.
ಶಾಂತಿನಗರದಲ್ಲಿರುವ ಐಎಸ್‍ಡಿ ಕಚೇರಿಯಲ್ಲಿ ಐಎಸ್‍ಡಿ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಹಲವರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.