ಮೈಸೂರು: ವೃದ್ಧ ದಂಪತಿಯನ್ನು ಹೆದರಿಸಿ ಮನೆ ದರೋಡೆ ಮಾಡಿದ್ದ ಐದು ಮಂದಿ ಬಂಧನ

Update: 2020-09-21 17:10 GMT

ಮೈಸೂರು, ಸೆ. 21: ವೃದ್ಧ ದಂಪತಿಗಳನ್ನು ಹೆದರಿಸಿ ಮನೆ ದರೋಡೆ ಮಾಡಿದ್ದ ಐದು ಮಂದಿಯನ್ನು ಬಂಧಿಸುವಲ್ಲಿ ದೇವರಾಜ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

5 ಮಂದಿಯ ತಂಡ ಚಿನ್ನಭರಣ ಮಾರಾಟ ಮಾಡಲು ಪ್ರಯತ್ನಿಸುತಿರುವುದಾಗಿ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪಿಎಸ್ ಐ ರಾಜು ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಬ್ಬರು ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸಿದ್ದು, ಮತ್ತೆ ಮೂರು ಮಂದಿ ಆಟೋ ಬಳಿ ನಿಂತಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದು, ಅವರು ಹದಿನೈದು ದಿನಗಳ ಹಿಂದೆ ಮೈಸೂರಿನ ಮನೆಯೊಂದರಲ್ಲಿ ಇದ್ದ ವಯಸ್ಸಾದ ದಂಪತಿಯನ್ನು ಹೆದರಿಸಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಸಾತಗಳ್ಳಿ  ಸಮೀಪದ ಜಬೀವುಲ್ಲಾ ಶರೀಫ್ (27), ಉದಯಗಿರಿ ನಿವಾಸಿ ಇಬ್ರಾಹಿಂ ಅಹ್ಮದ್ (24), ಗೌಸಿಯಾನಗರ ನಿವಾಸಿ ಬಟ್ಟೆ ವ್ಯಾಪಾರಿ ಖಾಸಿಫ್ (22),  ಹಾಸನ ಜಿಲ್ಲೆ ಗುಡ್ಡಯ್ಯನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ ಗವೀಗೌಡ (42),  ಹುಣಸೂರು ತಾಲೂಕು ನಿವಾಸಿ ಗಿರೀಶ್ ಬಿ.ಎಸ್ (52) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News