ಶಿವಮೊಗ್ಗ: 250ಕ್ಕೆ ತಲುಪಿದ ಕೋವಿಡ್ ಸಾವಿನ ಸಂಖ್ಯೆ

Update: 2020-09-23 17:01 GMT

ಶಿವಮೊಗ್ಗ, ಸೆ.23: ಕೋವಿಡ್‌ನಿಂದ ಬುಧವಾರ ಏಳು ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 250ಕ್ಕೆ ಏರಿಕೆಯಾಗಿದೆ. ಪ್ರತಿದಿನ ಸಾಯುವವರ ಸಂಖ್ಯೆ ಏರಿಕೆ ಆಗುತ್ತಲೇ ಇದೆ.

ಇಂದು 164 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 275 ಜನ ಗುಣಮುಖರಾಗಿದ್ದಾರೆ.

1397 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 534 ನೆಗೆಟಿವ್ ಬಂದಿವೆ. ಶಿವಮೊಗ್ಗ 88, ಭದ್ರಾವತಿ 18, ಶಿಕಾರಿಪುರ 20, ತೀರ್ಥಹಳ್ಳಿ 9, ಸಾಗರ 7, ಹೊಸನಗರ 17 ಮತ್ತು ಬೇರೆ ಜಿಲ್ಲೆಯ 5 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 197, ಕೋವಿಡ್ ಕೇರ್ ಸೆಂಟರ್‌ನಲ್ಲಿ 155, ಖಾಸಗಿ ಆಸ್ಪತ್ರೆಯಲ್ಲಿ 248 ಮತ್ತು ಮನೆಯಲ್ಲಿ 1088 ಜನ ಆರೈಕೆಯಲ್ಲಿದ್ದು, ಜಿಎಡಿ ಆಸ್ಪತ್ರೆಯಲ್ಲಿ 77 ಸೇರಿ ಒಟ್ಟು 1765 ಸಕ್ರಿಯ ಕೊರೋನ ಪ್ರಕರಣಗಳಿವೆ. ಒಟ್ಟು 6215 ಕಂಟೈನ್‌ಮೆಂಟ್ ಝೋನ್‌ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News