ಮೈಸೂರು: ಅರಮನೆ ಮಂಡಳಿ ಉಪನಿರ್ದೇಶಕರನ್ನು ವಜಾಗೊಳಿಸಲು ಆಗ್ರಹಿಸಿ ದಸಂಸ ಧರಣಿ

Update: 2020-09-24 18:09 GMT

ಮೈಸೂರು, ಸೆ.24: ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರ ಮೇಲೆ ಭ್ರಷ್ಟಾಚಾರದ ತನಿಖೆ ನಡೆಯುತ್ತಿದ್ದು, ತನ್ನ ಅವ್ಯವಹಾರಗಳಿಗೆ ಸಹಕರಿಸದ ಕಚೇರಿ ಸಿಬ್ಬಂದಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಧರಣಿ ನಡೆಸಿದ ದಸಂಸ ಕಾರ್ಯಕರ್ತರು, ಸುಬ್ರಮಣ್ಯ ಅವರನ್ನು ಸೇವೆಯಿಂದ ವಜಾಗೊಳಿಸಿ ವಿಶ್ವವಿಖ್ಯಾತ ಮತ್ತು ಐತಿಹಾಸಿಕ ಸ್ಮಾರಕವಾದ ಅರಮೆನಯನ್ನು ಸಂರಕ್ಷಿಸಿ ಇದರ ಘನತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಟಿ.ಎಸ್.ಸುಬ್ರಮಣ್ಯ ಅವರು ಅವ್ಯವಹಾರಗಳನ್ನು ನಡೆಸುತ್ತಾ 10 ವರ್ಷಗಳಿಂದಲೂ ಅರಮನೆಯಲ್ಲಿ ಬೀಡು ಬಿಟ್ಟಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಫೋರ್ಜರಿ ಅರ್ಜಿಗಳನ್ನು ತಯಾರು ಮಾಡಿ ಮೇಲಧಿಕಾರಿಗಳಿಗೆ ಪತ್ರ ಬರೆಸುವ ಮೂಲಕ ಕಾನೂನು ಬಾಹಿರ ಕೃತ್ಯವೆಸಗಿರುವುದು ತನಿಖೆಯಿಂದ ಸಾಬೀತಾಗಿದೆ. ಕಲಂ 420 ಸೇರಿದಂತೆ 6 ಪ್ರಕರಣಗಳು ದಾಖಲಾಗಿವೆ. ಇಷ್ಟೆಲ್ಲಾ ಭ್ರಷ್ಟಾಚಾರದಲ್ಲಿ ತೊಡಗಿರವ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ದೇವಾಜು ಬಿಳಿಕೆರೆ, ಸಂತೋಷ್ ತಳೂರು, ಶಿವಣ್ಣ ಶಂಕರಪುರ, ಶಿವರಾಜು ಅರಸನಕೆರೆ, ಮಹೇಶ ವರುಣ, ಸಂತೋಷ ಆಲತ್ತೂರು, ಮಹದೇವ ಪಿ.ಭಾಗ್ಯಮ್ಮ, ವನಿತಾ, ಶಂಕರ, ಚಂದ್ರಶೇಖರ ಹಾಗೂ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News