ಎರಡಂಕಿ ಲಾಟರಿ ಹಗರಣ ಪ್ರಕರಣ: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತು ಆದೇಶ ಹಿಂದಕ್ಕೆ

Update: 2020-09-25 13:45 GMT

ಬೆಂಗಳೂರು, ಸೆ.25: ಎರಡಂಕಿ ಲಾಟರಿ ಹಗರಣ ಪ್ರಕರಣ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದ ಬೆನ್ನಲ್ಲೇ ರಾಜ್ಯ ಸರಕಾರ ಅಮಾನತು ಆದೇಶ ಹಿಂದಕ್ಕೆ ತೆಗೆದುಕೊಂಡಿದೆ.

ಹಗರಣ ಆರೋಪ ಕೇಳಿಬಂದ ಹಿನ್ನೆಲೆ 5 ತಿಂಗಳ ಅವಧಿ ಸರಕಾರ ಅಲೋಕ್‍ ಕುಮಾರ್ ಅವರನ್ನು ಅಮಾನತು ಮಾಡಿತ್ತು. ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ಸಿಬಿಐ ವರದಿ ನೀಡಿದ ಹಿನ್ನೆಲೆ ಅಮಾನತು ಆದೇಶ ರದ್ದುಪಡಿಸಿ ಕರ್ತವ್ಯದಲ್ಲಿದ್ದಂತೆ ತೋರಿಸಲು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಅಲ್ಲದೆ, ಲಾಟರಿ ಹಗರಣಕ್ಕೂ ಅಲೋಕ್ ಕುಮಾರ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಅವರ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಐದು ತಿಂಗಳು ಅಮಾನತು ಮಾಡಲಾಗಿತ್ತು. ಆದರೆ, ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಹೀಗಾಗಿ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಇಲ್ಲವೆಂದು ಎಂದು ರಾಜ್ಯ ಸರಕಾರ ಆದೇಶದ ಪ್ರಕಟನೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News