ಮಾಹಿತಿ ಹಕ್ಕಿನಡಿ ಯಾವುದೇ ಮಾಹಿತಿ ನೀಡಬೇಡಿ: ಕಾರಾಗೃಹ ಅಧಿಕಾರಿಗಳಿಗೆ ಶಶಿಕಲಾ ಪತ್ರ

Update: 2020-09-25 15:01 GMT

ಬೆಂಗಳೂರು, ಸೆ.25: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರು ತಮ್ಮ ಬಿಡುಗಡೆ ವಿಚಾರವಾಗಿ ಯಾರಿಗೂ ಯಾವುದೇ ರೀತಿಯ ಮಾಹಿತಿ ನೀಡಬಾರದು ಎಂದು ತಮ್ಮ ವಕೀಲರ ಮೂಲಕ ಕಾರಾಗೃಹ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. 

ಮೂರು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಅವರು ಮುಂದಿನ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅವರು ಬಿಡುಗಡೆ ಕುರಿತು ಈಗಾಗಲೇ ಹಲವರು ಮಾಹಿತಿ ಹಕ್ಕಿನ ಅಡಿ ಮಾಹಿತಿ ಪಡೆಯುವ ಸಾಧ್ಯತೆ ಇದೆ.

ಈ ಹಿನ್ನೆಲೆ ಯಾವುದೇ ಕಾರಣಕ್ಕೂ ಶಿಕ್ಷೆ ಪೂರ್ಣಗೊಳ್ಳುವ ಅವಧಿ ದಿನ ಹಾಗೂ ನನಗೆ ಸಂಬಂಧಿಸಿದ ಇತರೆ ಯಾವ ಮಾಹಿತಿಯನ್ನು ಯಾರಿಗೂ ಕೂಡ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇದು ತಮ್ಮ ಖಾಸಗಿ ಮಾಹಿತಿ ಹಕ್ಕು ಆಗಿದೆ. ರಾಜಕೀಯ ವಿರೋಧಿಗಳು ಷಡ್ಯಂತ್ರಕ್ಕಾಗಿ ಮಾಹಿತಿ ಪಡೆದು, ಅದರಿಂದ ಪ್ರಚಾರ ಪಡೆಯುವ ಸಾಧ್ಯತೆಗಳಿವೆ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News