ಕಲಬುರಗಿ : ನಾಡ ಪಿಸ್ತೂಲು ಸಹಿತ ಗಾಂಜಾ ವಶ ; ಇಬ್ಬರು ಆರೋಪಿಗಳು ಸೆರೆ
Update: 2020-09-26 15:52 IST
ಕಲಬುರಗಿ : ಜೇವರ್ಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಹಾಗೂ ನಾಡ ಪಿಸ್ತೂಲ್ ಸಾಗಿಸುತ್ತಿದ್ದು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಆಂದೋಲ ಗ್ರಾಮದ ಲಾಲ್ ಅಹಮದ್ ಚಕರಿ ಹಾಗೂ ಬೆಂಗಳೂರು ದೊಡ್ಡಬಳ್ಳಾಪುರ ತಿರುಮಲ ಗೊಂಡ ಗ್ರಾಮದ ಚಂದ್ರಶೇಖರ್ ಈರಪ್ಪ ಬಂಧಿತರು.
ಆರೋಪಿಗಳಿಂದ 10 ಸಾವಿರ ರೂ. ಮೌಲ್ಯದ ಗಾಂಜಾ ಹಾಗೂ 27 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಕಾರು ಹಾಗೂ ತೂಕದ ಯಂತ್ರ ಸೇರಿ ಆರೋಪಿಗಳು ಬಳಸುತ್ತಿದ್ದ ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಜೇವರ್ಗಿ ಠಾಣೆ ಪೊಲೀಸರು ತಿಳಿಸಿದ್ದಾರೆ.