ಅನುದಾನ ರಹಿತ ಶಿಕ್ಷಕರ ನೆರವಿಗೆ ಸರಕಾರ ಧಾವಿಸಬೇಕು: ಬಸವರಾಜ ಹೊರಟ್ಟಿ ಆಗ್ರಹ

Update: 2020-09-26 16:51 GMT

ಬೆಂಗಳೂರು, ಸೆ.26: ಅನುದಾನ ರಹಿತ ಶಿಕ್ಷಕರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು ಎಂದು ಜೆಡಿಎಸ್ ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಶನಿವಾರ ವಿಧಾನಪರಿಷತ್‍ನಲ್ಲಿ ಕರ್ನಾಟಕ ಧನವಿನಿಯೋಗ(ಸಂಖ್ಯೆ 3) ವಿಧೇಯಕ 2020 ಮೇಲಿನ ಚರ್ಚೆಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹೊರಟ್ಟಿ, ಅನುದಾನ ರಹಿತ ಶಿಕ್ಷಕರು ಕೊರೋನ ಕಾರಣದಿಂದಾಗಿ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಅವರ ನೆರವಿಗೆ ಸರಕಾರ ಮುಂದಾಗಬೇಕು ಹಾಗೂ ಅವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮರಿತಿಬ್ಬೇಗೌಡ, ಶಿಕ್ಷಕರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅನುದಾನ ರಹಿತ ಶಾಲಾ ಶಿಕ್ಷಕರು ಎರಡು ಸಾವಿರಕ್ಕೆ ಅಥವಾ ಪುಕ್ಕಟೆಯಾಗಿ ದುಡಿದಿದ್ದಾರೆ. ಅವರಿಗೆ ಕೊರೋನ ಸಂಕಷ್ಟದ ವೇಳೆ ಸಹಾಯ ಮಾಡುವಂತೆ ಮುಖ್ಯಮಂತ್ರಿಗಳಿಗೆ ಹಲವು ಭಾರಿ ಮನವಿ ಮಾಡಲಾಗಿದೆ. ಆದರೆ, ಈ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ, ಕೂಡಲೇ ಅವರಿಗೆ ಆರೋಗ್ಯ ವಿಮಾ ಯೋಜನೆ ನೀಡಬೇಕು ಹಾಗೂ ಶಿಕ್ಷಕರಿಗೆ ಸಹಾಯ ನೀಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News