ಲಾಕ್‍ಡೌನ್ ಕಾಲದ ಪೂರ್ಣ ವೇತನ ನೀಡಲು ಸಾರಿಗೆ ನೌಕರರ ಒತ್ತಾಯ

Update: 2020-09-26 16:51 GMT

ಬೆಂಗಳೂರು, ಸೆ.26: ನಾಲ್ಕು ಸಾರಿಗೆ ನಿಗಮಗಳಲ್ಲೂ ಕೊರೋನ ಲಾಕ್‍ಡೌನ್ ಕಾಲದ ಪೂರ್ಣ ವೇತನ, ಭತ್ತೆ, ಪ್ರೋತ್ಸಾಹಧನ ಹಾಗೂ ರಜೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಒತ್ತಾಯಿಸಿದೆ.

ಸಾರಿಗೆ ನೌಕರರಿಗೆ ಬಲವಂತವಾಗಿ ಹಾಕಿಸಿರುವ ರಜೆಗಳನ್ನು ಮತ್ತೆ ಅವರ ಖಾತೆಗೆ ವರ್ಗಾಹಿಸಬೇಕು. ಅವರನ್ನು ಕರ್ತವ್ಯದ ಮೇಲೆ ಎಂದು ಪರಿಗಣಿಸಬೇಕು. ಯಾವ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೋ ಅಂತವರಿಗೆ ಡ್ಯೂಟಿ ಸಿಗದೇ ಇದ್ದರೂ ಅವರಿಗೆ ಹಾಜರಾತಿ ನೀಡುವುದು. 2020ರ ಜನವರಿಯಿಂದ ಹಿಡಿದಿರುವ ತುಟ್ಟಿಭತ್ತೆ ಹಾಗೂ ಇತರೆ ಭತ್ತೆಗಳು ಮತ್ತು ಪ್ರೋತ್ಸಾಹ ಧನ, ವೇತನ ಮುಂಬಡ್ತಿ ಕೂಡಲೇ ಬಿಡುಗಡೆ ಮಾಡಬೇಕು.

ಅಧಿಕಾರಿಗಳ ಸಹಿತ ಎಲ್ಲ ನೌಕರರಿಗೂ ಸಂಬಂಧಪಟ್ಟ ವೇತನ, ಭತ್ತೆ, ಪ್ರೋತ್ಸಾಹ ಧನ, ಬೋನಸ್ ಇತ್ಯಾದಿಗಳನ್ನು ಕೂಡಲೇ ಸರಕಾರದಿಂದ ಪಡೆಯಬೇಕು. ಕಾರ್ಮಿಕರಿಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ಫೆಡರೇಶನ್ ಜತೆ ಚರ್ಚಿಸಿ ಉಭಯತ್ರರಿಗೂ ಒಪ್ಪುವಂತಹ ತೀರ್ಮಾನ ಕೈಗೊಳ್ಳಬೇಕು ಎಂದು ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಹೆಚ್.ವಿ ಅನಂತ ಸುಬ್ಬರಾವ್ ಪ್ರಕಟನೆ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News