ಶಿವಮೊಗ್ಗ: ಬಂದ್ ಗೆ ಬೆಂಬಲ ನೀಡುವಂತೆ ಅಂಗಡಿಗಳಿಗೆ ತೆರಳಿ ಮನವಿ

Update: 2020-09-27 05:09 GMT

ಶಿವಮೊಗ್ಗ, ಸೆ.27: ಕೇಂದ್ರ ಹಾಗೂ ರಾಜ್ಯ ಸರಕಾರ ಸುಗ್ರೀವಾಜ್ಙೆಗಳ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸೆ.28ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಬಲ ನೀಡುವಂತೆ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳು ನಗರದ ಅಂಗಡಿಮುಂಗಟ್ಟುಗಳಿಗೆ ಬೇಡಿ ನೀಡಿ ಕರ ಪತ್ರ ಹಂಚುವ ಮೂಲಕ ಮನವಿ ಮಾಡಿಕೊಂಡವು.

ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋದಿಸಿ ಕರೆ ನೀಡಿರುವ ಬಂದ್ ಗೆ ಶಿವಮೊಗ್ಗ ನಗರದ ಸಾರ್ವಜನಿಕರು ಸಹಕರಿಸಿ ಬೆಂಬಲ ನೀಡುವ ಮೂಲಕ ಬಂದ್ ಯಶಸ್ವಿಗೊಳಿಸಬೇಕು ಎಂದು ನಗರದ ಸಾವರ್ಜನಿಕರಿಗೆ, ಆಟೋ ಚಾಲಕರಿಗೆ ಹಾಗೂ ಅಂಗಡಿ ಮುಂಗಟ್ಟುಗಳ ಮಾಲಕರಿಗೆ ಹಾಗೂ ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಗಾಂಧಿ ಬಜಾರ್, ನೆಹರೂ ರಸ್ತೆ, ಬಿ.ಎಚ್ ರಸ್ತೆ, ದುರ್ಗಿಗುಡಿ ಸೇರಿದಂತೆ ವಿವಿಧ ಕಡೆ ಮೆರವಣಿಗೆ ನಡೆಸಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ರೈತ ಮುಖಂಡ ಎಚ್.ಆರ್.ಬಸವರಾಜಪ್ಪ, ಪ್ರಗತಿಪರ ಮುಖಂಡ ಕೆ.ಎಲ್.ಅಶೋಕ್, ಕೆ.ಪಿ.ಶ್ರೀಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News