ಮೈದಾನಿಮೂಲೆ: ಕ್ಯಾಂಪಸ್ ಎಸ್ಸೆಸ್ಸೆಫ್ ವತಿಯಿಂದ ಕ್ವಿಝ್ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

Update: 2020-09-27 13:40 GMT

ಕುಂಬ್ರ: ಎಸ್ಸೆಸ್ಸೆಫ್ ಕ್ಯಾಂಪಸ್ ಮೈದಾನಿಮೂಲೆ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಕ್ವಿಝ್ ಸ್ಪರ್ಧೆ ಹಾಗೂ ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಭಿನಂದನಾ ಸಮಾರಂಭ ರವಿವಾರ ಮೈದಾನಿಮೂಲೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಮೈದಾನಿಮೂಲೆ ಜುಮಾ ಮಸೀದಿ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ ಪ್ರಾರ್ಥನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಕಾರ್ಯದರ್ಶಿ ಹಾರಿಸ್ ಅಡ್ಕ, ಮೈದಾನಿಮೂಲೆ ಜುಮಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಕೆ.ಎ, ಕುಂಬ್ರ ಸೆಕ್ಟರ್ ಉಪಾಧ್ಯಕ್ಷ ರಂಶೀದ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಕಟ್ಟತ್ತಾರು, ಕ್ಯಾಂಪಸ್ ಕಾರ್ಯದರ್ಶಿ ಇರ್ಶಾದ್ ಗಟ್ಟಮನೆ, ಜೊತೆ ಕಾರ್ಯದರ್ಶಿ ಅರಾಫತ್ ಆಶಿಕ್, ಮೈದಾನಿಮೂಲೆ ಶಾಖೆಯ ಅಧ್ಯಕ್ಷ ಜಮಾಲುದ್ದೀನ್, ಉಪಾಧ್ಯಕ್ಷ ಅಸ್ಕರ್ ನೀರ್ಪಾಡಿ, ಕೆಸಿಎಫ್ ನಾಯಕ ಸಲೀಂ ಸಖಾಫಿ, ಯು.ಕೆ ಇಬ್ರಾಹಿಂ ಉಜ್ರೋಡಿ, ಸಹದ್ ಮೈದಾನಿಮೂಲೆ, ಫಾರೂಕು ಇ.ಎ, ಮೊಯ್ದುಕುಂಞಿ, ಹಸೈನಾರ್ ಬಾಳಯ, ಉಸ್ಮಾನ್ ನೀರ್ಪಾಡಿ ಸಹಿತ ಹಲವರು ಉಪಸ್ಥಿತರಿದ್ದರು.

ಕ್ವಿಝ್ ಫಲಿತಾಂಶ
ವಿದ್ಯಾರ್ಥಿಗಳಿಗಾಗಿ ನಡೆಸಿದ ಕ್ವಿಝ್ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಮುಖ್ತಾರ್ ಉಜ್ರೋಡಿ, ದ್ವಿತೀಯ ಪ್ರಶಸ್ತಿ ರಿಝ್ವಾನ್ ಅಡ್ಕ , ಸೀನಿಯರ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಅಹ್ಮದ್ ಮುಕ್ಶೀದ್, ದ್ವಿತೀಯ ಪ್ರಶಸ್ತಿ ರುಹೈಬ್ ಮುಳಿಯಡ್ಕ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕ್ಯಾಂಪಸ್ ಕಾರ್ಯದರ್ಶಿ ಆಶಿಕ್ ಉಜ್ರೋಡಿ ಸ್ವಾಗತಿಸಿ, ಸಾಬಿರ್ ಉಜ್ರೋಡಿ ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News