ಪತಿ ಸಾವಿನ ಬೆನ್ನಲ್ಲೇ ಪತ್ನಿಗೆ ಹೃದಯಾಘಾತ: ಸಾವಿನಲ್ಲೂ ಜೊತೆಯಾದ ದಂಪತಿ

Update: 2020-09-27 14:18 GMT

ಹುಬ್ಬಳ್ಳಿ, ಸೆ.27: ಪತಿ ಸಾವನ್ನಪ್ಪಿದ ಸುದ್ದಿ ತಿಳಿದು ಆಘಾತಗೊಂಡ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ರವಿವಾರ ನಡೆದಿದೆ.

ರವಿವಾರ ಬೆಳಿಗ್ಗೆ 6:30ಕ್ಕೆ ಫೆರುದ್ದೀನ್ ಇಮಾಮ್ ಸಾಬ್ ಪಠಾಣ್(74) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬಸ್ಥರು, ಸಂಬಂಧಿಗಳು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫೆರುದ್ದೀನ್ ಪಠಾಣ್(70) ಪತಿಯ ಸಾವಿನಿಂದ ಆಘಾತಗೊಂಡು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದ್ದು, ಇಬ್ಬರೂ ಅದೇ ದಿನ ಸಾವನ್ನಪ್ಪಿದ್ದನ್ನು ಕಂಡು ಪಟ್ಟಣದ ಜನರಿಗೆ ಸಹ ನೋವುಂಟಾಗಿದೆ. ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ ಎಂದು ಕುಂದಗೋಳ ಪಟ್ಟಣದ ಜನ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News