ಅಧಿವೇಶನ ಅವಧಿ ಮೊಟಕುಗೊಳಿಸಿದ್ದು ದುರಂತ: ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ

Update: 2020-09-30 11:29 GMT

ಬೆಂಗಳೂರು, ಸೆ.30: ರಾಜ್ಯ ಸರಕಾರವು ಮಳೆಗಾಲದ ಅಧಿವೇಶನದ ಅವಧಿ ಕಡಿತ ಮಾಡಿದ್ದು ದುರಂತದ ಸಂಗತಿ. ಕನಿಷ್ಠ 30 ರಿಂದ 35 ದಿನ ಅಧಿವೇಶನ ನಡೆಸಬೇಕಿತ್ತು ಎಂದು ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಸಮಯದಲ್ಲಿ ಸರಕಾರದ ಕ್ರಮದ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದರೆ, ಆ ಕೆಲಸ ಆಗದೆ ಸದನ ಮೊಟಕು ಮಾಡಿದ್ದು ಸರಿಯಲ್ಲ ಎಂದು ತಿಳಿಸಿದರು.

ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ಕಾಯ್ದೆಗಳ ಬಗ್ಗೆ ಪ್ರತಿಕ್ರಿಯಿಸಿ, ಈ ಕಾಯ್ದೆಗಳನ್ನ ನಾನು ವಿರೋಧಿಸುತ್ತೇನೆ, ಇವುಗಳ ಬಗ್ಗೆ ಕನಿಷ್ಠ 10 ದಿನವಾದರೂ ಚರ್ಚೆ ಆಗಬೇಕಿತ್ತು. ಆದರೆ, ಆದು ಆಗಿಲ್ಲ ಎಂಬ ನೋವು ನನಗಿದೆ. ಸರಕಾರ ಭೂ ಶಾಸನ ಬದಲಾವಣೆ ಮಾಡಬಾರದಿತ್ತು. ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲವಾಗುತ್ತೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News