ಲಂಚ ಸ್ವೀಕಾರ: ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಸಿಬಿ ಬಲೆಗೆ

Update: 2020-09-30 14:31 GMT

ಯಾದಗಿರಿ, ಸೆ.30: ಹನಿ ನೀರಾವರಿ ಯೋಜನೆಯ ಸಬ್ಸಿಡಿ ನೀಡುವುದಕ್ಕಾಗಿ ಯಾದಗಿರಿ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಯಾದಗಿರಿ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ನಡೆದಿದೆ.

ಹಣದ ಸಮೇತ ಸಿಕ್ಕಿ ಬಿದ್ದ ಉಪ ನಿರ್ದೇಶಕ ಮಲ್ಲಿಕಾರ್ಜುನ್, 'ನಿಮ್ಮ ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ' ಎಂದು ಎಸಿಬಿ ಪೊಲೀಸರ ಬಳಿ ಗೋಳಾಡಿದ್ದಾರೆ ಎಂದು ತಿಳಿದುಬಂದಿದೆ.

ಯಾದಗಿರಿ ಜಿಲ್ಲೆಯ ಕೌಳೂರು ಗ್ರಾಮದ ಶಿವಾರೆಡ್ಡಿ ಎಂಬವರಿಗೆ ಹನಿ ನೀರಾವರಿ ಯೋಜನೆಯ 1 ಲಕ್ಷ ರೂ. ಸಬ್ಸಿಡಿ ನೀಡಬೇಕಿತ್ತು. ಆ  ಹಣ ನೀಡಲು ಮಲ್ಲಿಕಾರ್ಜುನ್ 5 ಸಾವಿರ ರೂ. ಲಂಚ ಕೇಳಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿದ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದಾರೆ. ಲಂಚ ಸ್ವೀಕರಿಸುವ ವೇಳೆ ಸಾಕ್ಷಿ ಸಮೇತ ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News