ರಾಜ್ಯದಲ್ಲಿಂದು 10 ಸಾವಿರ ಕೊರೋನ ಪ್ರಕರಣಗಳು ದೃಢ: 130 ಮಂದಿ ಮೃತ್ಯು

Update: 2020-10-01 16:30 GMT

ಬೆಂಗಳೂರು, ಅ.1: ರಾಜ್ಯದಲ್ಲಿ ಗುರುವಾರ 10,070 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 130 ಜನರು ಸೋಂಕಿಗೆ ಬಲಿಯಾಗಿದ್ದು, 7,144 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 6,11,837ಕ್ಕೆ ತಲುಪಿದ್ದು, 811 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 8,994ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 1,10,412ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

130 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 2, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 41, ಬೀದರ್ 2, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ದಕ್ಷಿಣ ಕನ್ನಡ 11, ಧಾರವಾಡ 5, ಹಾಸನ 3, ಹಾವೇರಿ 1, ಕೊಡಗು 4, ಕೋಲಾರ 5, ಕೊಪ್ಪಳ 5,  ಮಂಡ್ಯ 2, ಮೈಸೂರು 25, ರಾಯಚೂರು 1, ರಾಮನಗರ 1, ಶಿವಮೊಗ್ಗ 4, ತುಮಕೂರು 8, ಉಡುಪಿ 3,  ವಿಜಯಪುರ 1, ಯಾದಗಿರಿ  ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 10,070 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 336, ಬಳ್ಳಾರಿ 486, ಬೆಳಗಾವಿ 115, ಬೆಂಗಳೂರು ಗ್ರಾಮಾಂತರ 169, ಬೆಂಗಳೂರು ನಗರ 4,853, ಬೀದರ್ 64, ಚಾಮರಾಜನಗರ 116, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 184, ಚಿತ್ರದುರ್ಗ 82, ದಕ್ಷಿಣ ಕನ್ನಡ 493, ದಾವಣಗೆರೆ 148, ಧಾರವಾಡ 153, ಗದಗ 146, ಹಾಸನ 383, ಹಾವೇರಿ 155, ಕಲಬುರ್ಗಿ 219, ಕೊಡಗು 58, ಕೋಲಾರ 53, ಕೊಪ್ಪಳ 103, ಮಂಡ್ಯ 266, ಮೈಸೂರು 101, ರಾಯಚೂರು 79, ರಾಮನಗರ 74, ಶಿವಮೊಗ್ಗ 138, ತುಮಕೂರು 274, ಉಡುಪಿ 275, ಉತ್ತರ ಕನ್ನಡ 87, ವಿಜಯಪುರ 257, ಯಾದಗಿರಿ ಜಿಲ್ಲೆಯಲ್ಲಿ 159 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News