ನಿಲ್ಲದ ಕೋವಿಡ್ ಸಾವಿನ ಸರಣಿ: ರಾಜ್ಯದಲ್ಲಿ ಮತ್ತೆ 100 ಮಂದಿ ಸೋಂಕಿಗೆ ಬಲಿ
ಬೆಂಗಳೂರು, ಅ.3: ಶನಿವಾರ ರಾಜ್ಯಾದ್ಯಂತ 9,886 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 100 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 6,30,516ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 9,219ಕ್ಕೆ ಏರಿಕೆಯಾಗಿದೆ. ಶನಿವಾರ 8989 ಜನರು ಸೇರಿದಂತೆ ಇದುವರೆಗೂ 5,08,495 ಜನರು ಸೋಂಕಿನಿಂದ ಮುಕ್ತರಾಗಿದ್ದರೆ, 1,12,783 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 841 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.
ಸೋಂಕಿತರ ವಿವರ: ಬಾಗಲಕೋಟೆ 88, ಬಳ್ಳಾರಿ 253, ಬೆಳಗಾವಿ 258, ಬೆಂಗಳೂರು ಗ್ರಾಮಾಂತರ 283, ಬೆಂಗಳೂರು ನಗರ 3925, ಬೀದರ್ 14, ಚಾಮರಾಜನಗರ 179, ಚಿಕ್ಕಬಳ್ಳಾಪುರ 234, ಚಿಕ್ಕಮಗಳೂರು 175, ಚಿತ್ರದುರ್ಗ 76, ದಕ್ಷಿಣ ಕನ್ನಡ 258, ದಾವಣಗೆರೆ 129, ಧಾರವಾಡ 98, ಗದಗ 32, ಹಾಸನ 460, ಹಾವೇರಿ 71, ಕಲಬುರಗಿ 107, ಕೊಡಗು 37, ಕೋಲಾರ 20, ಕೊಪ್ಪಳ 98, ಮಂಡ್ಯ 206, ಮೈಸೂರು 1514, ರಾಯಚೂರು 199, ರಾಮನಗರ 58, ಶಿವಮೊಗ್ಗ 337, ತುಮಕೂರು 302, ಉಡುಪಿ 158, ಉತ್ತರ ಕನ್ನಡ 92, ವಿಜಯಪುರ 97, ಯಾದಗಿರಿ 128 ಹೊಸ ಪ್ರಕರಣಗಳು ವರದಿಯಾಗಿವೆ.
ಮೃತಪಟ್ಟವರ ವಿವರ: ಬಳ್ಳಾರಿ 4, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 21, ಬೀದರ್ 2, ಚಾಮರಾಜನಗರ 1, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 9, ದಾವಣಗೆರೆ 1, ಧಾರವಾಡ 5, ಗದಗ 1, ಹಾಸನ 6, ಹಾವೇರಿ 2, ಕಲಬುರಗಿ 2, ಕೊಪ್ಪಳ 2, ಮಂಡ್ಯ 2, ಮೈಸೂರು 18, ರಾಯಚೂರು 1, ಶಿವಮೊಗ್ಗ 3, ತುಮಕೂರು 6, ಉಡುಪಿ 3, ಉತ್ತರ ಕನ್ನಡ 4, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಮರಣ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ 612 ಜ್ವರ ಚಿಕಿತ್ಸಾಲಯಗಳಲ್ಲಿ ಶನಿವಾರ 4610 ಸೇರಿದಂತೆ 26,74,578 ಜನರನ್ನು ತಪಾಸಣೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 150 ಜ್ವರ ಚಿಕಿತ್ಸಾಲಯದಲ್ಲಿ ಇಂದು 3914 ಸೇರಿ 2,95,126 ಜನರನ್ನು ತಪಾಸಣೆ ನಡೆಸಲಾಗಿದೆ ಹಾಗೂ ರಾಜ್ಯದ 69 ಖಾಸಗಿ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜುಗಳಲ್ಲಿ ಶನಿವಾರ 211 ವ್ಯಕ್ತಿಗಳು ಸೇರಿದಂತೆ 1,76,524 ವ್ಯಕ್ತಿಗಳನ್ನು ತಪಾಸಣೆ ನಡೆಸಲಾಗಿದೆ.