ರವಿವಾರ ಒಂದೇ ದಿನ 2 ಸ್ಪರ್ಧಾತ್ಮಕ ಪರೀಕ್ಷೆ; ಗೊಂದಲದಲ್ಲಿ ಅಭ್ಯರ್ಥಿಗಳು
Update: 2020-10-03 22:44 IST
ಬೆಂಗಳೂರು, ಅ.3: ಅ.4ರ ರವಿವಾರ ಒಂದೇ ದಿನ ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ ಹಾಗೂ ಟಿಇಟಿ(ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ) ಪರೀಕ್ಷೆ ನಿಗದಿಯಾಗಿದ್ದು, ಪರೀಕ್ಷಾ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.
ಯುಪಿಎಸ್‍ಸಿ ಕಳೆದ 3 ತಿಂಗಳ ಹಿಂದೆಯೇ ಅ.4ರಂದು ಪರೀಕ್ಷೆ ನಡೆಸುವುದಾಗಿ ದಿನಾಂಕ ಪ್ರಕಟಿಸಿತ್ತು. ಇನ್ನು ಟಿಇಟಿ ಪರೀಕ್ಷೆ ಈ ಹಿಂದೆ ಎರಡು ಬಾರಿ ಮುಂದೂಡಲಾಗಿತ್ತು. ಮತ್ತೆ ಎಪ್ರಿಲ್ 12 ರಂದು ಟಿಇಟಿ ಪರೀಕ್ಷೆ ದಿನಾಂಕ ಪ್ರಕಟವಾಗಿತ್ತು.
ಆದರೆ ಕೆ-ಸೆಟ್ ಪರೀಕ್ಷೆ ಹಿನ್ನಲೆ ರದ್ದಾಗಿದ್ದು ಇನ್ನೊಮ್ಮೆ ರವಿವಾರದ ಲಾಕ್‍ಡೌನ್ ನಿಂದ ಮುಂದೂಡಿಕೆಯಾಗಿ ಅ.4ರ ರವಿವಾರದಂದು ಪರೀಕ್ಷಾ ದಿನಾಂಕ ನಿಗದಿ ಪಡಿಸಲಾಗಿದೆ. ಹೀಗಾಗಿ ಎರಡೂ ಪರೀಕ್ಷೆಗಳನ್ನ ತೆಗೆದುಕೊಳ್ಳಬೇಕಿದ್ದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.