ಬಳ್ಳಾರಿ ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಲು ಸಂಸದ ದೇವೇಂದ್ರಪ್ಪ ಮನವಿ

Update: 2020-10-04 16:12 GMT

ಬಳ್ಳಾರಿ, ಅ. 4: ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಬಳ್ಳಾರಿ ನಗರವನ್ನು ಕೇಂದ್ರ ಸರಕಾರದ ಸ್ಮಾರ್ಟ್‍ಸಿಟಿ ಯೋಜನೆಗೆ ಸೇರ್ಪಡೆಗೊಳಿಸಿ ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಳ್ಳಾರಿ ಹಾಗೂ ಕಲಬುರಗಿ ಮಾತ್ರ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ನಗರಪಾಲಿಕೆಗಳಾಗಿವೆ. ಅತ್ಯಂತ ಹಳೆಯ ನಗರವಾಗಿರುವ ಬಳ್ಳಾರಿ ಅರ್ಥಿಕತೆಯ ಪ್ರಮುಖ ಕೇಂದ್ರವಾಗಿದೆ. ಹೀಗಾಗಿ ಬಳ್ಳಾರಿ ನಗರವನ್ನು ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ತರುವುದರಿಂದ ಸಾಕಷ್ಟು ಅನುಕೂಲವಾಗಲಿದೆ.

ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಬಳ್ಳಾರಿಯನ್ನು ಸೇರ್ಪಡೆಗೊಳಿಸಿಕೊಳ್ಳುವುದರಿಂದ ನಗರದ ಮೂಲಭೂತ ಸೌಕರ್ಯಗಳು ಹೆಚ್ಚಾಗುತ್ತವೆ. ಹಾಗೂ ಈ ಭಾಗದಲ್ಲಿ ಆರ್ಥಿಕತೆಗೆ ಪುಷ್ಟಿಯನ್ನು ನೀಡಿದಂತ್ತಾಗುತ್ತದೆ. ಹೀಗಾಗಿ ಸಚಿವೆ ನಿರ್ಮಲಾ ಸೀತಾರಾಮನ್‍ರನ್ನು ಇತ್ತೀಚೆಗೆ ದಿಲ್ಲಿಯಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ, ಬಳ್ಳಾರಿ ನಗರದ ಬಗ್ಗೆ ಸಣ್ಣ ಪುಸ್ತಿಕೆಯನ್ನು ನೀಡಿದ್ದೇನೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News